ಹೆಣವಿನ್ನು ಮನೆಯಿಂದ ಸ್ಮಶಾನ ತಲುಪಿರ್ಲಿಲ್ಲ, ಆಗಲೇ ಮನೆಯಲ್ಲಿ ಆಸ್ತಿ ಹಂಚುವಿಕೆಯ ಜಗಳ ಶುರುವಾಗಿತ್ತು . ಯಾರಿಗೆ ಯಾವುದು ಸಿಗಬೇಕು ಯಾರು ಯಾರಿಗೆ ಎಷ್ಟು ಹಂಚಬೇಕು ಅನ್ನೋದರ ಬಗ್ಗೆ ವಾದ ವಿವಾದಗಳು ಹೆಚ್ಚಾಗ್ತಾ ಹೋದವು. ಪರಿಸ್ಥಿತಿ ವಿಕೋಪಕ್ಕೆ ಹೋಯಿತು ಜೊತೆಯಲ್ಲಿದ್ದ ಹೆಣಕ್ಕೂ ಬೆಂಕಿ ಹಚ್ಚುವುದಕ್ಕೆ ಮನೆಯವರು ಬರಲಿಲ್ಲ, ಮನೆಯವರೆಲ್ಲರೂ ಸತ್ತವ ಸಂಪಾದನೆ ಮಾಡಿದ್ದನ್ನ ಹಂಚಿಕೊಂಡು ನೆಮ್ಮದಿಯ ಬದುಕಿಗೆ ಕನಸು ಕಾಣುತ್ತಿದ್ದರು. ಅಲ್ಲಿ ಚಿತೆಯಲ್ಲಿ ಉರುತ್ತಿದ್ದವ ಇಷ್ಟು ದಿನ ತಾ ಬದುಕಿನಲ್ಲಿ ಕಂಡ ಕಂಡವರ ಮೇಲೆ ಉರಿದು ಸಂಪಾದಿಸಿದ್ದಕ್ಕೆ ವ್ಯಥೆಪಡುತ್ತಾ ಇದ್ದ. ತನ್ನ ಬದುಕಿನ ಅರ್ಥವು ಆತನಿಗೆ ಮಸಣದಲ್ಲಿ ಮಲಗಿದ ಮೇಲಾಗಿತ್ತು. ಸತ್ತದ್ದಕ್ಕೆ ನೆಮ್ಮದಿ ಇತ್ತು.ಆದರೆ ಒಳಿತನ್ನ ತನ್ನವರಿಗೆ  ಕಲಿಸುವುದಕ್ಕಾಗಲಿಲ್ಲವಲ್ಲ ಅನ್ನುವ ನೋವಿತ್ತು. ಹಾಗೆಯೇ ಸುಟ್ಟು ಬೂದಿಯಾದ ಬೂದಿ ಆಗಸದಲ್ಲಿ ಹಾರಿತು ನೀರಿನಲ್ಲಿ ಸೇರಿತು ಎಲ್ಲರೊಳಗೊಂದಾಯಿತು ಆದರೆ ಮನೆಯೊಳಗೆ ಮಾತ್ರ ಎಲ್ಲರೂ ಬೇರೆಬೇರೆಯಾದರು. - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ