ಆ ಪುಟ್ಟ ಕಾಡಿಗೆ ನೋವಾಗಿದೆ. ಸಮೃದ್ಧವಾಗಿ ಹರಿಯುತ್ತಿದ್ದ ನದಿ ಜಲಪಾತವಾದದ್ದಕ್ಕೆ ಬೇಸರ ಪಡುತ್ತಿದೆ, ಎತ್ತರದ ಗುಡ್ಡವು ನೋವುಣ್ಣುತ್ತಿದೆ, ಇವೆಲ್ಲವೂ ತಾವು ಇದ್ದ ಹಾಗೆ ಬದುಕಿದ್ದವು. ಆದರೆ ಅದರ ಸೌಂದರ್ಯವನ್ನ ಕಣ್ತುಂಬಿಸಿಕೊಳ್ಳುವುದಕ್ಕೆ ಅಂತ ಬಂದವರು ಅದನ್ನು ಹಾಗೆ ಬದುಕುವುದಕ್ಕೆ ಬಿಟ್ಟಿಲ್ಲ .ಅದಕ್ಕೆ ಇನ್ನೊಂದಷ್ಟು ಹೆಚ್ಚು ನೋವನ್ನು ನೀಡಿ ಅಲ್ಲಿಂದ ಹೊರಟು ಹೋಗಿದ್ದಾರೆ. ಬಂದವರೆಲ್ಲರೂ ತಮ್ಮ ತೀಟೆಗಳನ್ನು ತೀರಿಸಿಕೊಳ್ಳುವುದಕ್ಕೆ ಎಲ್ಲದಕ್ಕೂ ನೋವನ್ನ ನೀಡುತ್ತಿದ್ದಾರೆ. ಆ ಕ್ಷಣಕ್ಕೆ ಬಂದು ಸಂಭ್ರಮಿಸಿ ಹೊರಟು ಹೋಗಿದ್ದಾರೆ ಆದರೆ ಮಾಡಿದ ಅನಾಚಾರವನ್ನು ಕೊನೆಯವರೆಗೂ ಅನುಭವಿಸಬೇಕಾದ್ದು ಈ ಬೆಟ್ಟ ಕಾಡು ನದಿಗಳು. ಮನಸ್ಸು ಉಲ್ಲಸಿತವಾಗುವುದಕ್ಕೆ ಹೀಗೆ ಒಮ್ಮೆ ಪಯಣ ಮಾಡಿ ಕಣ್ತುಂಬಿಸಿಕೊಳ್ಳಿ ಹಾಗೆ ಹೊರಟುಬಿಡಿ ನಮಗೆ ತೊಂದರೆ ಕೊಟ್ಟು ನೋವು ನೀಡಿ ನಮಗೆ ಬದುಕುವುದಕ್ಕೆ ಸಾಧ್ಯವಾಗದ ರೀತಿ ಮಾಡಿ ಹೊರಡೋದೇನಕೆ. ಹೀಗಾಗಿ ಬಿಟ್ಟರೆ ನೀವು ನಮ್ಮನ್ನ ನೋಡುವುದಕ್ಕೆ ಬರಬೇಕಂತ ಏನೂ ಇಲ್ಲ. ನಾವು ನಿಮಗೆ ಸುಂದರ ಕಾಣಿಸೊ ಕಾರಣಕ್ಕೆ ಬದುಕುತ್ತಿರುವುದಲ್ಲ ಇದು ನಮ್ಮ ನಿಜವಾದ ಬದುಕಿನ ರೀತಿ. ನೀವು ಬರದೇ ಇದ್ದರೆ ನಾವು ಅದ್ಭುತವಾಗಿರುತ್ತೇವೆ. ಹೀಗೆ ಕಾಡು ಬಿಟ್ಟ ನದಿಗಳು ಬೇಡಿಕೊಳ್ಳುತ್ತಿವೆ ಬೇಡಿಕೆಯನ್ನ ಒಪ್ಪಿಕೊಂಡು ಅನುಸರಿಸಬೇಕಾದು ನಮ್ಮ ಕರ್ತವ್ಯ ತಾನೇ? - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ