ಕನ್ನಡ ಪತ್ರಿಕಾ ಲೋಕ (ಭಾಗ ೨೩೬) - ಕೃಷಿ ಸಮಯ
ಶ್ರೀರಾಮ ದಿವಾಣ
ನವೆಂಬರ್ ೨೯, ೨೦೨೫
೮ ವೀಕ್ಷಣೆಗಳು
ನಾಗೇಶ್ ಕೆ. ಎನ್. ರವರ "ಕೃಷಿ ಸಮಯ"
ಬೆಂಗಳೂರಿನ ನಾಗೇಶ್ ಕೆ. ಎನ್. ಅವರು ಸಂಪಾದಕರು, ಪ್ರಕಾಶಕರು, ಮುದ್ರಕರು, ಮಾಲಿಕರು ಆಗಿರುವ ಮಾಸಪತ್ರಿಕೆ "ಕೃಷಿ ಸಮಯ". ನಂದಿನಿ ಲೇಔಟ್ ಗಣೇಶ್ ಬ್ಲಾಕ್ ನಾಲ್ಕನೇ ಕ್ರಾಸ್ ನಲ್ಲಿರುವ ಕಟ್ಟಡದಲ್ಲಿ ಪತ್ರಿಕಾ ಕಚೇರಿಯಿದೆ.
೨೦೧೨ರಲ್ಲಿ ಆರಂಭವಾದ ಕೃಷಿ ಸಮಯ, ೩೬ ಪುಟಗಳೊಂದಿಗೆ ಬಹುವರ್ಣದಲ್ಲಿ ಬರುತ್ತಿದೆ. ಬಿಡಿ ಸಂಚಿಕೆಯ ಬೆಲೆ ೫೦ ರೂಪಾಯಿಗಳು. ರವಿ ಕುಮಾರ್ ಸಹ ಸಂಪಾದಕರು. ಆಶಾ ಟಿ. ಎಸ್. ಉಪ ಸಂಪಾದಕರು. ಸಿದ್ಧೇಶ್ವರ್ ಕೆ. ಎನ್. ವ್ಯವಸ್ಥಾಪಕರು. ತ್ಯಾಗಟೂರ್ ಸಿದ್ಧೇಶ್ ವಿಶೇಷ ಪ್ರತಿನಿಧಿ.
ಮುರಳೀಧರ ರಾಠೋಡ್ ಪುಟ ವಿನ್ಯಾಸಕರು. ಬಿ. ಟಿ. ವೆಂಕಟೇಶ್ ಕಾನೂನು ಸಲಹೆಗಾರರು. ಕಡಿದಾಳು ಶಾಮಣ್ಣ, ಡಾ. ದೇವಿಂದರ್ ಶರ್ಮ, ನಾಗೇಶ್ ಹೆಗಡೆ, ಕೆ. ಟಿ. ಗಂಗಾಧರ್, ಕೋಡಿಹಳ್ಳಿ ಚಂದ್ರಶೇಖರ್, ಎಂ. ಎ. ಪೊನ್ನಪ್ಪ, ಬಿ. ಜಿ. ಗುಜ್ಜಾರಪ್ಪ ಹಾಗೂ ವೈ. ಜಿ. ಅಶೋಕ್ ಕುಮಾರ್ ಸಲಹಾ ಸಮಿತಿ ಸದಸ್ಯರಾಗಿದ್ದರು.
~ ಶ್ರೀರಾಮ ದಿವಾಣ
ಪ್ರಕಟಿಸಿದ: ನವೆಂಬರ್ ೨೯, ೨೦೨೫
|
ನವೀಕರಿಸಿದ: ಏಪ್ರಿಲ್ ೨೩, ೨೦೨೬