ಸ್ಪರ್ಧೆ ಸೂರಿ: ಎಲ್ಲರೂ ಯಾಕೆ ಹೀಗೆ ಓಡುತ್ತಿದ್ದಾರೆ ಅಪ್ಪ? ಅಪ್ಪ: ಇದು ಓಟದ ಸ್ಪರ್ಧೆ ಕಣಪ್ಪ, ಯಾರು ಓಡಿ ಮೊದಲು ಬಂದು ಗೆಲ್ತಾರೆ ಅವನಿಗೆ ಬಹುಮಾನ ಕೊಡ್ತಾರೆ. ಸೂರಿ :  ಗೆಲ್ಲುವ ಒಬ್ಬನಿಗೆ ಮಾತ್ರ ಬಹುಮಾನ ಕೊಡೋದಾದ್ರೆ ಮಿಕ್ಕ ಎಲ್ಲರೂ ಯಾಕೆ ಹುಚ್ಚರ ತರಹ ಓಡ್ತಿದ್ದಾರೆ? *** ನನಗಿದು ಬೇಕಿತ್ತಾ…? ಕೋಟದಲ್ಲಿ ಒಂದು ಸಲ ಕೋಣನ ಪೈರಿಗೆ ಹೋಗಿದ್ದೆ, ಅಲ್ಲಿ ಒಂದು ಬದಿಯಲ್ಲಿ ಗರ್‌ಗರ್‌ ಮಂಡಲಕ್ಕೆ ಜನರು ನೆರೆದಿದ್ದರು, ಇನ್ನೊಂದು ಕಡೆ ಕೋಳಿ ಪಡೆಗೆ ಹೀಗೆ ಜನ ಗುಂಪು ಸೇರಿದ್ದರು. ಹಾಗೇ ಇನ್ನೊಂದು ಕಡೆ ಸೇರಿದ ಗುಂಪನ್ನೂ ಕುತೂಹಲದಿಂದ ನೋಡಿಕೊಂಡು ಬರೋಣ ಅಂತ ಜನರ ಹಾಗೇ ಇನ್ನೊಂದು ಮಾಡಿಕೊಂಡು ಮುಂದೆ ಹೋದೆ. ಒಬ್ಬ ಆರಡಿ ಎತ್ತರದ ಕಟ್ಟುಮಸ್ತಾದ ಆಳು ಹೇಳುತ್ತಿದ್ದ. 'ಈ ಊರಲ್ಲಿ ಯಾರಿಗಾದರೂ ದಂ ಇದ್ದರೆ ಮುಂದೆ ಬನ್ನಿ ನೋಡೋಣ,...' ಎಲ್ಲರೂ ಸುಮ್ಮನಿದ್ದರು.ಅವನು ಪುನಃ,' ಏನು? ಯಾ ' ಯಾರಿಗೂ ದಂ ಇಲ್ವಾ? ಯಾರಿಗೂ ಇಲ್ವಾ? ನಿಮಗೆ? ನಿಮಗೆ? ನಿನಗೆ? ಓ ನಿನಗೆ? ಏನು ಯಾರಿಗೂ ದಂ ಇಲ್ವಾ? ಛೇ ಎಂತಹ ನಾಚಿಕೆಗೇಡು.' ಹೀಯಾಳಿಸುವ ಹಾಗೆ ಹೇಳಿದ. ಯಾರದೂ ಪ್ರತಿಕ್ರಿಯೆಯೇ ಇರಲಿಲ್ಲ. ಬಹುಶಃ ಅವನ ನೋಡಿ ಹೆದರಿರಬಹುದು. ನನಗೆ ತಡ್ಕೊಳ್ಳೋಕೆ ಆಗಲಿಲ್ಲ. ಗಟ್ಟಿಯಾಗಿ, 'ಏಯ್ ಎಂತದಾ ನಿಂದು? ನಾನ್ ಇದ್ದೀನಿ. ನನಗೆ ದಂ ಇದೆ, ತೋರಿಸಬೇಕಾ? ಏನು ಮಾಡ್ತೀಯಾ?, ನೋಡೇ ಬಿಡ್ತೀನಿ. ಅಂದೆ. (ನಾನೇ ಮುಂದೆ ಹೋಗಿದ್ದು ಅಲ್ಲ ಮಾರಾಯ್ರೆ, ಯಾರೋ ನನ್ನ ನೋಡಿ ಮುಂದೆ ತಳ್ಳಿದ್ದು, ಹೇಗೂ ಮುಂದೆ ಬಂದಾಯ್ತಲ್ಲ, ಅವನ ಹತ್ತಿರ ಸುಮ್ಮನೇ ಪೆಟ್ಟು ತಿನ್ನೋ ಬದಲಿಗೆ ಒಂದು ಆವಾಜ್ ಹಾಕಿದ್ರೆ ಹೆದರುತ್ತಾನೋ ನೋಡೋಣ, ಹಾಗೆಯೇ ಜನರೂ ಸಪೋರ್ಟ್ ಮಾಡಬಹುದು ಎಂಬ ನಂಬಿಕೆಯಲ್ಲಿ ಹಾಗೆ ಮಾತಾಡಿದ್ದೆ) ಅವನು ನಯದಿಂದ, 'ನಮಸ್ಕಾರ ಅಣ್ಣಾ, ನೀನು ಒಬ್ಬನಾದರೂ ಇದ್ದೀಯಲ್ಲ. ನನ್ನ ಮರ್ಯಾದೆ ಉಳಿಸೋಕೆ. ಬಾ ಬಾ,' ಅನ್ನುತ್ತಾ ಜೇಬಿನಿಂದ ಸ್ಟೆತೋಸ್ಕೋಪ್ ತೆಗೆದು, 'ಎಷ್ಟು ಸಮಯದಿಂದ ದಂ ಇದೆ? ಏನೇನು ಟ್ರೇಟ್‌ಮೆಂಟ್ ತಗೊಂಡಿದ್ದೆ? ದಂ ಯಾವಾಗಲೂ ಇರುತ್ತಾ ಚಳಿಗಾಲದಲ್ಲಿ ಮಾತ್ರ ಇರುತ್ತಾ?' ಅಂತ ಪರೀಕ್ಷೆ ಮಾಡತೊಡಗಿದ. ಅವನೊಬ್ಬ ನಾಟಿವೈದ್ಯ, ಅಸ್ತಮಾಕ್ಕೆ ಔಷಧಿ ಕೊಡುವವ. "ಅಲ್ಲಾ ನನಗಿದು ಬೇಕಿತ್ತಾ?'' *** ಆರೋಗ್ಯಕರ ನಿದ್ರೆ ಶಿಕ್ಷಕಿ: ಮಕ್ಕಳೇ, ಒಳ್ಳೆಯ ಆರೋಗ್ಯಕ್ಕಾಗಿ ನೀವು ಎಂಟು ಗಂಟೆಗಳ ಕಾಲ ಮಲಗಬೇಕು. ಸೂರಿ: ಅದು ಹೇಗೆ ಸಾಧ್ಯ ಮೇಡo, ಶಾಲೆ ಇರುವುದು ಬರೀ ಏಳು ಗಂಟೆ ಮಾತ್ರ ! *** ನಾಯಿ ಸೂರಿ ಬೇಕರಿಗೆ ಹೋದ. ಅಲ್ಲೊಂದು ದೊಡ್ಡ ಗಡವ ನಾಯಿ ಕುಳಿತಿರುವುದನ್ನು ನೋಡಿ ಹೆದರಿದ. ಸೂರಿ: ಸರ್, ನಿಮ್ಮ ನಾಯಿ ಕಚ್ಚಲ್ಪ? ಬೇಕರಿ ಓನರ್: ಇಲ್ಲ ನಮ್ಮ ನಾಯಿ ಕಚ್ಚಲ್ಲ.  ಸೂರಿ ಧೈರ್ಯವಾಗಿ ಬೇಕರಿಗೆ ಹೋಗಿ, ಸೂರಿ: ಏನ್ ಸಾರ್, ನಿಮ್ಮ ನಾಯಿ ಕಚ್ಚಲ್ಲ ಅಂದಿದ್ರಿ, ಇಲ್ಲಿ ನೋಡಿ ಹೇಗೆ ಕಚ್ಚಿದೆ ! ಬೇಕರಿ ಓನರ್: ನಿಜವಾಗಿಯೂ ನಮ್ಮ ನಾಯಿ ಕಚ್ಚಲ್ಲ, ಅದು ಮನೆಯಲ್ಲಿ ಇದೆ. ಇದು ಬೀದಿ ನಾಯಿ! *** ಕಾರಣ ಸೂರಿ: ನಾಳೆಯಿಂದ ನಾನು ಸ್ಕೂಲ್‌ ಹೋಗಲ್ಲಮ್ಮ ಅಲ್ಲಿ ತುಂಬಾ ಹೊಡಿತಾರೆ.  ತಾಯಿ: ನೀನು ತುಂಬಾ ಗಲಾಟೆ ಮಾಡುತ್ತಿರಬೇಕು. ಅದಕ್ಕೆ ಹೊಡಿತಾರೆ. ಸೂರಿ: ಇಲ್ಲಮ್ಮ ಸುಮ್ಮನೆ ಮಲ್ಗೊಂಡಿದ್ದೂ ಹೊಡೀತಾರೆ ! *** ಹೆಂಡ್ತಿ ಫೋನ್ ಸೂರಿ ಕಿವಿ ಬಳಿಯಿಂದ ಫೋನು ಕೆಳಗಿಳಿಸುತ್ತಾ ಹೇಳಿದ, 'ಸಾರಿ ಕಣೋ... ಹೆಂಡತಿಯಿಂದ ಫೋನ್ ಬಂದಿತ್ತು... ಹಾಗಾಗಿ ನಿನ್ನನ್ನು ಸುಮ್ಮನೇ ನಿಲ್ಲುವ ಹಾಗೆ ಮಾಡಿದೆ !' ಅದು ನಿನ್ನ ಹೆಂಡತಿಯದ್ದೇ ಅಂತ ನನಗೆ ಆಗಲೇ ಗೊತ್ತಾಗಿತ್ತು ಬಿಡಯ್ಯಾ...'  'ಹೇಗೆ ? ನಾನು ಹೇಳೇ ಇಲ್ಲವಲ್ಲಾ !' "ಹೇಳೋದೇಕೆ ಬೇಕು? ಒಂದು ಗಂಟೆಯಿಂದ ಬರೇ ಹೂಂ... ಹಾಂ... ಅಂತಿದ್ದೆಯಲ್ಲಾ... ಬೇರೆ ಯಾರದ್ದೇ ಆಗಿದ್ರೂ ನೀನು ಕೋಲೆ ಬಸವ ಆಗಿರಲಿಲ್ಲ, ಅಲ್ವಾ?!' (ಸಂಗ್ರಹ) ಚಿತ್ರ ಕೃಪೆ: ಅಂತರ್ಜಾಲ ತಾಣ