ಸ್ಟೇಟಸ್ ಕತೆಗಳು (ಭಾಗ ೧೫೧೮) - ಯಾಕೆ?
ಬರಹಗಾರರ ಬಳಗ
ನವೆಂಬರ್ ೩೦, ೨೦೨೫
೧೯ ವೀಕ್ಷಣೆಗಳು
ಮತ್ತೆ ಮತ್ತೆ ಒತ್ತಿ ಹೇಳಿದರು ಅಮ್ಮ, ನನಗೆ ಹಾಕಿಸಿದ ಚಿನ್ನದ ಮಾಲೆಗೆ ಅಣ್ಣನೂ ದುಡ್ಡು ಕೊಟ್ಟಿದ್ದಾನೆ ಅಂತ ಹೇಳಬೇಕು. ಅರ್ಥವಾಯಿತು ತಾನೆ. ಆಯ್ತಮ್ಮಾ... ಮಗಳ ಮನಸ್ಸಲ್ಲಿ ಯೋಚನೆಗಳು ಓಡುತ್ತಿವೆ, ಅಲ್ಲಾ ನಾನು ಯಾಕೆ ಅಣ್ಣನ ಹೆಸರು ಹೇಳಬೇಕು.
ಅದಕ್ಕೆ ಸಾಲ ನನ್ನದು, ಮತ್ತೆ ಕಟ್ಟುವುದು ನಾನೇ, ನನ್ನ ಉಳಿತಾಯದ ದುಡ್ಡು ಎಲ್ಲವೂ ನನ್ನದೇ ಆಗಿರುವಾಗ, ಅದರ ಕ್ರೆಡಿಟ್ ಅಣ್ಣನಿಗೆ ಯಾಕೆ ಕೊಡಬೇಕು. ಮಗಳು ಕೊಡಿಸಬಾರದಾ? ಅಥವಾ ಅಣ್ಣನ ಗೌರವ ಕಡಿಮೆ ಆಗುತ್ತಾ... ಗೊತ್ತಿಲ್ಲ. ಇವರ ಯೋಚನೆಗಳು ಯಾವಾಗ ಬದಲಾಗುತ್ತವೋ ತಿಳಿದಿಲ್ಲ. ಮಗಳು ಮನಸ್ಸಿಲ್ಲದಿದ್ದರೂ ಒಪ್ಪಿಗೆ ಎಂದಳು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ನವೆಂಬರ್ ೩೦, ೨೦೨೫
|
ನವೀಕರಿಸಿದ: ಏಪ್ರಿಲ್ ೨೩, ೨೦೨೬