ಸ್ಟೇಟಸ್ ಕತೆಗಳು (ಭಾಗ ೧೫೨೪) - ಸಾವು
ಬರಹಗಾರರ ಬಳಗ
ಡಿಸೆಂಬರ್ ೦೬, ೨೦೨೫
೩೩ ವೀಕ್ಷಣೆಗಳು
ಸಾವು ಬದುಕನ್ನು ಕಲಿಸಬೇಕು. ಅವತ್ತು ಅಜ್ಜನ ಸಾವಿನ ಮನೆಯಲ್ಲಿ ಕುಳಿತು ಅಪ್ಪ ಹೇಳ್ತಾ ಇದ್ರು, ನನಗೆ ಅದು ವಿಚಿತ್ರ ಅನ್ನಿಸಿತು. ಅಪ್ಪ ಅನ್ನೋದು ಸಾವಿನಿಂದ ಬದುಕು ಕಲಿಯೋದಂತೆ ಹೇಗೆ? ನಮ್ಮ ಜೀವನವೇ ಇಷ್ಟೇ ಅಂತ ಅಂದುಕೊಳ್ಳುವುದಾ, ಅಪ್ಪ ಹೇಳಿದರು, ಇಲ್ಲ ಪ್ರತಿ ಸಾವು ನಮಗೊಂದು ಪಾಠ ಕಲಿಸುತ್ತೆ ನಾವು ಸಂಪಾದಿಸಿದ್ದೇನು? ಕಳೆದುಕೊಂಡದ್ದೇನು? ಮಾಡಿದ ಮೋಸಗಳೇನು? ಹರಿಸಿದ ಕಣ್ಣೀರುಗಳು ಎಷ್ಟು ? ಇದೆಲ್ಲವೂ ಬೇಕಾ? ಬೇಡ್ವಾ? ಅನ್ನುವ ಪ್ರಶ್ನೆ ನಮ್ಮ ಮುಂದೆ ಇಡುತ್ತದೆ. ಸಾವಿಗೆ ಕಾರಣ ಏನು ಅನ್ನೋದನ್ನ ತಿಳಿಸುತ್ತದೆ. ನಮ್ಮ ಸ್ವಂತ ತಪ್ಪಿನಿಂದ ಮರಣ ಹೊಂದಿದೆವೋ ಅಥವಾ ಬೇರೆಯವರದೋ? ಸಾವಿಗೆ ಕಾರಣವನ್ನು ಹುಡುಕಿ ನಾವು ಆ ಕಾರಣಕ್ಕೆ ಆಶ್ರಯದಾತರಾಗಬಾರದು. ಹಾಗಾಗಿ ಕಲಿಯೋಕೆ ಇದೆ ಪ್ರತಿ ಸಾವಿನಿಂದಲೂ ಬದುಕನ್ನು ಕಲಿತುಕೋ ಬದುಕಿಗೆ ತುಂಬಾ ಒಳ್ಳೆಯ ಪಾಠ ಅಪ್ಪ ಹೇಳಿದ ಮೇಲೆ ಕೇಳಬೇಕಲ್ವಾ?
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಡಿಸೆಂಬರ್ ೦೬, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬