ಸ್ಟೇಟಸ್ ಕತೆಗಳು (ಭಾಗ ೧೫೨೭) - ಬಲೂನ್
ಬರಹಗಾರರ ಬಳಗ
ಡಿಸೆಂಬರ್ ೧೦, ೨೦೨೫
೪೩ ವೀಕ್ಷಣೆಗಳು
ಆ ಮಗು ಬಲೂನನ್ನ ಹಿಡಿದುಕೊಂಡು ಮೇಲೆ ಕೆಳಗೆ ಮೇಲೆ ಕೆಳಗೆ ಆಡಿಸುತ್ತಿತ್ತು. ಬಲೂನ್ ಗೆ ಅಲ್ಲಿ ಇರುವುದಕ್ಕೆ ತುಂಬಾ ಸಂಕಟವಾಗುತ್ತಿತ್ತು, ಆ ಮಗುವಿನ ಕೈಯಿಂದ ತಪ್ಪಿಸಿಕೊಂಡು ಹಾಗೆ ಗಾಳಿಯಲ್ಲಿ ಹಾರಿಬಿಡ್ತು. ತುಂಬಾ ಸ್ವತಂತ್ರವಾದ ಬದುಕು, ಯಾರು ನನ್ನನ್ನ ಕೇಳೋರಿಲ್ಲ ಎಷ್ಟು ಎತ್ತರಕ್ಕೆ ಬೇಕಾದ್ರೂ ಹಾರಬಹುದು ಎಲ್ಲೇ ಬೇಕಾದರೂ ಸುಮ್ಮನೆ ಕುಳಿತುಕೊಳ್ಳಬಹುದು, ನಾನು ಯಾರ ಹಂಗಿನಲ್ಲೂ ಇಲ್ಲ ,ಈ ಸಂಭ್ರಮದಲ್ಲಿ ಮುಂದುವರೆಯುತ್ತಿದ್ದ ಬಲೂನು ಊರು ಊರುಗಳನ್ನ ದಾಟಿ ಹೊಸ ಹೊಸ ಲೋಕಗಳನ್ನ ನೋಡಿಕೊಂಡು ಹೊರಟಿತು. ಎಲ್ಲಾ ಬಲುನುಗಳಿಗೆ ಇದೇ ಸಂದೇಶ ನೀಡಬೇಕು ಅನ್ನೋ ಕಾರಣಕ್ಕೆ ಅಲ್ಲಿಂದ ಭೂಮಿಗಿಳಿಯುತ್ತಾ ಹೋದ ಹಾಗೆ ಆ ವಾತಾವರಣದಲ್ಲಿ ಒಂದು ಕಡೆ ಸ್ಥಿರವಾಗಿ ನಿಲ್ಲುವುದಕ್ಕಾಗಿಲ್ಲ. ಗಾಳಿ ಬಂದ ಕಡೆ ತೂರಿ ಕೊಳ್ಳುವ ಅಭ್ಯಾಸವಾಯಿತು. ಸುತ್ತ ನಿಂತವರೆಲ್ಲರೂ ಆ ಬಲೂನನ್ನ ಒಡೆಯುವುದಕ್ಕೆ ಕಾಯ್ತಾಯಿದ್ರು ಎಷ್ಟೇ ತಪ್ಪಿಸಿಕೊಂಡರೂ ಕೂಡ ಕೊನೆಗೊಂದು ಸಲ ಯಾರದು ಕೈಗೆ ಸಿಕ್ಕಿ ಒಡೆದು ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಬಿಡ್ತು. ಆಗ ಬಲೂನಿಗೆ ಅರ್ಥವಾಗಿ ಹೋಯಿತು ತನ್ನೊಳಗೆ ತುಂಬಿಸಿಕೊಂಡ ಮತ್ತು ತನ್ನ ಹೊರಗಡೆಯಿಂದ ಬೀಸುತ್ತಿರುವ ಗಾಳಿ ಯಾವ ಕಡೆಗೆ ಬೇಕಾದರೂ ಕೊಂಡು ಹೋಗಬಹುದು. ಆದರೆ ತನ್ನ ನಿಯಂತ್ರಣವಿರುವವರ ಕೈಯಲ್ಲಿದ್ದಷ್ಟು ಸಮಯ ತಾನು ಜತನವಾಗಿರಬಹುದು ನಿಯಂತ್ರಣ ತಪ್ಪದರೆ ಸಾವೇ ಗತಿ ಅನ್ನೋದು ಅರ್ಥವಾಯಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಡಿಸೆಂಬರ್ ೧೦, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬