ಸ್ಟೇಟಸ್ ಕತೆಗಳು (ಭಾಗ ೧೫೨೯) - ಎಡಬಿಡಂಗಿ
ಬರಹಗಾರರ ಬಳಗ
ಡಿಸೆಂಬರ್ ೧೨, ೨೦೨೫
೨೩ ವೀಕ್ಷಣೆಗಳು
ನಮಗೆ ದುಡ್ಡು ಮಾಡಬೇಕು. ಬೇರೇನಿಲ್ಲ ನಾವು ಶಾಲೆಯೊಳಗೆ ಕುಡಿತ ಕೆಟ್ಟದ್ದು, ಡ್ರಗ್ಸು ಗಾಂಜಾ ಮುಟ್ಟಬಾರದು, ಸಿಗರೇಟ್ ಗುಟ್ಕಗಳ ಹತ್ತಿರ ಹೋಗಲೇ ಬಾರದು ಹೀಗೆ ವಿದ್ಯಾರ್ಥಿಗಳಿಗೆ ಪಾಠ ಮಾಡಿಸುತ್ತೇವೆ. ಅದನ್ನೇ ಅನುಸರಿಸಬೇಕು ಅಂತ ಹೇಳುತ್ತೇವೆ. ನಾವು ಹಾಗೆ ಮಾಡ ಕೂಡದು ಆದರೆ ನಮ್ಮ ಸರಕಾರಕ್ಕೆ ಒಂದಷ್ಟು ಖರ್ಚಾಗುತ್ತಲ್ಲ, ಹಾಗಾಗಿ ರಸ್ತೆ ಬದಿಯಲ್ಲಿ ಕುಡಿತದ ಅಂಗಡಿಗಳನ್ನು ಇನ್ನೂ ಹೆಚ್ಚು ತೆರೆಯುವುದಕ್ಕೆ ಯೋಚನೆ ಮಾಡ್ತಾ ಇದ್ದೇವೆ. ಶಾಲೆಗಳು ಹೇಗೂ ಇರುತ್ತವೆ. ಅದರಿಂದ ನಮಗೇನು ಹಣ ಸಂಪಾದನೆ ಆಗುವುದಿಲ್ಲ. ಹಾಗಾಗಿ ಇನ್ನೊಂದಷ್ಟು ಹೆಚ್ಚು ಕುಡಿತದ ಅಂಗಡಿಗಳನ್ನು ತೆರೆಯಬೇಕು. 24 ಗಂಟೆಯೂ ತೆರೆದಿರುವಂತೆ ಮಾಡಬೇಕು. ಇದು ನಮ್ಮ ತಪ್ಪಲ್ಲ. ಕೆಟ್ಟದ್ದು ಅಂತ ಗೊತ್ತಿದ್ದಾಗಲೂ ಜನ ಬಂದು ಹೋಗ್ತಾರಲ್ಲ ಅದು ಜನರ ತಪ್ಪು. ಅದು ನಮ್ಮದಲ್ಲ ಹಾಗಾಗಿ ನೀವು ಇದರ ಬಗ್ಗೆ ವಿರೋಧ ಮಾಡುವ ಹಾಗಿಲ್ಲ. ನಾವು ಯಾರನ್ನು ಬಂದು ಕುಡಿಯಿರಿ ಅಂತ ಪ್ರೋತ್ಸಾಹಿಸುತ್ತಿಲ್ಲ. ಎಲ್ಲಾ ಕಡೆಗೂ ಅಂಗಡಿಗಳನ್ನು ತೆರೆದಿದ್ದೇವೆ ಅಷ್ಟೇ. ಆದರೆ ನೇರವಾಗಿ ಅಲ್ಲದಿದ್ದರೂ ಜನ ಬರಬೇಕು ಕುಡಿಬೇಕು ಅದರಿಂದಾಗಿ ನಮ್ಮ ರಾಜ್ಯ ಉದ್ದಾರ ಆಗುತ್ತೆ. ನಿಮಗೆ ರಾಜ್ಯ ಉದ್ದಾರ ಆಗಬೇಕು ತಾನೆ. ಹೀಗೆ ಹೇಳುತ್ತಿದ್ದರು ನಾಯಕರಾದ ಎಡಬಿಡಂಗಿ ರಾಯ. ಎಲ್ರೂ ಕೇಳಿ ಚಪ್ಪಾಳೆ ತಟ್ಟುತ್ತಾ ಇದ್ದರು ಯಾರು ಅದನ್ನು ಪ್ರಶ್ನೆ ಮಾಡಲೇ ಇಲ್ಲ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಡಿಸೆಂಬರ್ ೧೨, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬