ಮನೆಯಲ್ಲಿ ಅಮ್ಮನ ಬಳಿ ಕೇಳಿಕೊಂಡಿದ್ದ ಅಮ್ಮಾ ಅಪ್ಪನ ಬಳಿ ನನಗೊಂದು ಮೊಬೈಲ್ ಕೊಡಿಸುವುದಕ್ಕೆ ಹೇಳು? ಅಮ್ಮ, ಈಗ ಅದು ಸದ್ಯಕ್ಕೆ ಬೇಡ ಮಗ ಸಾಲಗಳು ಒಂದಷ್ಟು ಕಡಿಮೆಯಾಗಲಿ ಅದಕ್ಕ ಹಾಕುವ ಹಣದಲ್ಲಿ ಮನೆ ಒಂದು ಸ್ವಲ್ಪ ಚೆನ್ನಾಗಾಗಲಿ ಅಂತ. ಮಗ ಕೇಳುವುದಕ್ಕೆ ತಯಾರಿರ್ಲಿಲ್ಲ ತರಗತಿಯಲ್ಲಿ ಇರುವವರೆಲ್ಲರ ಬಳಿಯುವ ಮೊಬೈಲ್ ಇದೆ ಅವರೆಲ್ಲರೂ ಒಬ್ಬರ ಬಳಿ ಒಬ್ಬರು ಮಾತಾಡಿಕೊಳ್ಳುತ್ತಾರೆ ನಾನು ಮೊಬೈಲ್ ಇಲ್ಲ ಅಂತಿದ್ರೆ ತುಂಬಾ ಸಣ್ಣವನಾಗಿ ಬಿಡ್ತೀನಿ, ನನಗೊಂದು ಮೊಬೈಲ್ ಕೊಡಿಸು ಅಂತ. ಹೀಗೆ ಕೇಳ್ತಾ ಕೇಳ್ತಾ ವಾರಗಳು ದಾಟಿಬಿಟ್ಟಿದ್ದವು ಮನೆಯಲ್ಲಿ ಮೊಬೈಲ್ ಕೊಡಿಸುವ ಯಾವ ಲಕ್ಷಣವೂ ಕಾಣಲಿಲ್ಲ ಆ ದಿನ ನನಗೆ ಮೊಬೈಲ್ ಕೊಡಿಸದಿದ್ದರೆ ಊಟ ಮಾಡುವುದಿಲ್ಲ ಅಂದಾಗ  ಅಪ್ಪ ಸ್ವಲ್ಪ ಸಿಟ್ಟಿನಲ್ಲೇ ಮಾತನಾಡಿ ಬಿಟ್ರು. ಈ ಮೊಬೈಲ್ ಮೊಬೈಲ್ ಅಂತ ಹಠ ಮಾಡೋದನ್ನು ಬಿಟ್ಟು ಸರಿಯಾಗಿ ಶಾಲೆಯಲ್ಲಿ ಓದುವುದನ್ನು ಕಲಿ ಅಂಕಗಳಿಲ್ಲ ತರಗತಿಯಲ್ಲಿ ನಿನ್ನ ಬಗ್ಗೆ ಹೆಚ್ಚು ಕಂಪ್ಲೇಂಟ್ ಗಳಿವೆ ಅದನ್ನು ಸರಿ ಮಾಡಿಕೋ ಆಮೇಲೆ ಮೊಬೈಲ್ ಬಗ್ಗೆ ಮಾತಾಡಿದರೆ ಆಯಿತು. ಮರುದಿನ ಕೆಲಸಕ್ಕೆ ಹೋಗಿದ್ದ ಅಪ್ಪ ಅಮ್ಮ ಮನೆಗೆ ಬಂದಿದ್ದರು ಶಾಲೆಗೆ ಹೋಗಿದ್ದ ಮಗ ಮಾತ್ರ ಮನೆಗೆ ಬರಲೇ ಇಲ್ಲ ಗಂಟೆಗಳ ನಂತರ ಸುದ್ದಿ ಗೊತ್ತಾಯ್ತು ನದಿಯಲ್ಲಿ ಜೀವವಿಲ್ಲದ ಹೆಣ ತೇಲುತ್ತಿತ್ತು. ಬದುಕು ಗಟ್ಟಿಯಾಗಬೇಕಿತ್ತು ಮನೆ ಬೀಳುವ ಹಂತದಲ್ಲಿದ್ದು ಅದನ್ನು ನಿಲ್ಲಿಸೋಕಾಗದೆ ತಾನು ಆಸೆ ಪಟ್ಟ ಮೊಬೈಲ್ ಸಿಗದ ಕಾರಣಕ್ಕೆ ಅದ್ಭುತ ಕನಸುಗಳು ಇದ್ದ ಹುಡುಗ ಜೀವನ ಕಳೆದುಕೊಂಡು ಬಿಟ್ಟಿದ್ದ. ಅವನ ಬದುಕನ್ನೇ ಆಸೆಪಟ್ಟಿದ್ದು ತಂದೆ ತಾಯಿಗಳಿಗೆ ಎಲ್ಲವೂ ಕನಸಾಗಿ ಉಳಿದುಬಿಡ್ತು. - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ