ಸ್ಟೇಟಸ್ ಕತೆಗಳು (ಭಾಗ ೧೫೪೭) - ಅಭಿವೃದ್ಧಿ
ಬರಹಗಾರರ ಬಳಗ
ಡಿಸೆಂಬರ್ ೩೦, ೨೦೨೫
೧೧ ವೀಕ್ಷಣೆಗಳು
ಸರ್ ಪರಿಸರಕ್ಕೆ ತುಂಬಾ ಸಮಸ್ಯೆ ಆಗ್ತಾ ಇದೆ. ಜನ ನೆಮ್ಮದಿಯಾಗಿ ಬದುಕೋಕೆ ಆಗ್ತಾ ಇಲ್ಲ. ಉಸಿರಾಟದ ತೊಂದರೆ ಉಂಟಾಗಿದೆ ಪ್ರಾಣಿ ಪಕ್ಷಿಗಳು ಸಾಯುತ್ತಿವೆ ಹಾಗಾಗಿ ಸರಕಾರಿ ಜಾಗ ಒತ್ತುವರಿ ಮಾಡಿಕೊಂಡು ಅಭಿವೃದ್ಧಿ ಅನ್ನುವ ಹೆಸರಿನಲ್ಲಿ ಪರಿಸರ ನಾಶ ಮಾಡುವಂತಹ ಆ ಕೆಲಸವನ್ನು ನಿಲ್ಲಿಸಬೇಕಲ್ವಾ ?"
ಆ ಕೆಲಸವನ್ನು ನಿಲ್ಲಿಸುವುದಕ್ಕೆ ಸಾಧ್ಯ ಆಗುವುದಿಲ್ಲ ಯಾಕೆಂದರೆ ಅವರು ಇಂತಿಷ್ಟು ದುಡ್ಡನ್ನ ಸರಕಾರಕ್ಕೆ ನೀಡ್ತಾ ಇದ್ದಾರೆ. ಅದಲ್ಲದೆ ಸುತ್ತ ಮುತ್ತಲಿನ ಜನರಿಗೆ ಅಷ್ಟೊಂದು ದೊಡ್ಡಮಟ್ಟಿನ ತೊಂದರೆ ಆಗ್ತಾ ಇಲ್ಲ, ಯಾರೂ ಕೂಡ ಸತ್ತ ಉದಾಹರಣೆ ಇಲ್ಲ. ಒಂದಷ್ಟು ಜನರ ಕೈ ಬಿಸಿ ಮಾಡಿದರೆ ಇದು ಕೂಡ ಸುದ್ದಿ ಆಗೋದಿಲ್ಲ . ಮಾಧ್ಯಮಕ್ಕೆ ಕಾಣುವುದಿಲ್ಲ ಅವರ ಕಣ್ಣಿಗೆ ಇನ್ನೊಂದಷ್ಟು ಬೇರೆ ಬೇರೆ ಸುದ್ದಿಗಳಿವೆ ಹಾಗಾಗಿ ನಾವು ನೆಮ್ಮದಿಯಾಗಿರಬಹುದು"
ಆದರೂ ಜನರಿಗೆ ತೊಂದರೆ ಕೊಟ್ಟು ಅಭಿವೃದ್ಧಿ ಮಾಡೋದು ಎಷ್ಟೋ ಸರಿ. ನಿನ್ನ ಕೆಲಸ ಮಾಡಿದ್ಯಾ? ಮನೆಗೆ ಹೋದಿಯ? ಅಷ್ಟು ಸಾಕು, ಪರಿಸರ ಅಭಿವೃದ್ಧಿ ಒಳಿತು ಕೆಡುಕುಗಳ ಬಗ್ಗೆ ಯೋಚಿಸಬೇಡ… ಹಣದ ಮುಂದೆ ಯಾವುದೂ ಕಣಲೇ ಇಲ್ಲ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಡಿಸೆಂಬರ್ ೩೦, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬