ಸ್ಟೇಟಸ್ ಕತೆಗಳು (ಭಾಗ ೧೫೪೮) - ದ್ರೋಹ
ಬರಹಗಾರರ ಬಳಗ
ಡಿಸೆಂಬರ್ ೩೧, ೨೦೨೫
೨೬ ವೀಕ್ಷಣೆಗಳು
ರಾಜೇಶನ ಬಳಿ ಹಲವರು ಮಾತುಬಿಟ್ಟಿದ್ದಾರೆ. ಅವನೊಂದಿಗೆ ಎದುರಿನಲ್ಲಿ ನಕ್ಕರೂ ಹಿಂದಿನಿಂದ ಅವನ ಬಗ್ಗೆ ಕುಹಕವಾಡುವವರೇ ಹೆಚ್ಚು. ಅವನೊಂದಿಗೆ ಮಾತು ಬಿಟ್ಟವರೆಲ್ಲರೂ ಆತನೊಂದಿಗೆ ವ್ಯವಹರಿಸಿದವರೇ, ಆತನ ಬಗ್ಗೆ ತಿಳಿದವರೇ ಆದರೂ ಈಗೀಗ ಆತನ ಕರೆಯನ್ನ ಯಾರೂ ಸ್ವೀಕರಿಸುತ್ತಿಲ್ಲ. ಎಲ್ಲವೂ ಆತನ ಸಹಚರರಿಂದಲೇ ಆಗಿರುವುದು. ಆತನ ಜೊತೆಗಿದ್ದವರು ಮಾಡಿದ ನಂಬಿಕೆ ದ್ರೋಹಕ್ಕೆ ಈತ ಬೆಲೆ ತೆತ್ತಿದ್ದಾನೆ. ಈಗಲೂ ತೆರುತ್ತಿದ್ದಾನೆ. ಮತ್ತೆ ಸಂಪಾದನೆಗೆ ಎಷ್ಟೇ ಪ್ರಯತ್ನ ಪಟ್ಟರೂ ಮುರಿದ ಕನ್ನಡಿಯ ಚೂರುಗಳನ್ನ ಎಷ್ಟೇ ಜೋಡಿಸಿದರೂ ಬಿರುಕುಗಳು ಹಾಗೇ ಉಳಿಯುತ್ತವೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಡಿಸೆಂಬರ್ ೩೧, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬