ಬಳ್ಳಾರಿ ರಾಜಕೀಯ ಘರ್ಷಣೆಗೆ ಗನ್ ಬಳಕೆ ಅತಿ ಕಳವಳಕಾರಿ
ಕೆ.ಪಿ.ಅಶ್ವಿನ್ ರಾವ್
ಜನವರಿ ೦೩, ೨೦೨೬
೧೨ ವೀಕ್ಷಣೆಗಳು
ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣದ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಳ್ಳಾರಿ ರಾಜಕಾರಣದಲ್ಲಿ ಒಳಗೊಳಗೇ ಕುದಿಯುತ್ತಿದ್ದದ್ದೇ ಒಮ್ಮ ಸ್ಫೋಟಗೊಂಡಿದ್ದು, ಒಬ್ಬ ಕಾರ್ಯಕರ್ತನನ್ನು ಬಲಿ ಪಡೆದಿದೆ. ಬಳ್ಳಾರಿಯಲ್ಲಿ ಗುರುವಾರ ರಾತ್ರಿ ನಡೆದಿರುವ ಘಟನಾವಳಿಗಳನ್ನು ಗಮನಿಸಿದರೆ, ಇದು ಎರಡು ಪಕ್ಷಗಳು, ಅದರಲ್ಲೂ ವಿಶೇಷವಾಗಿ ಎರಡು ರಾಜಕಾರಣಿಗಳ ನಡುವಣ ಕಿಚ್ಚು ಧಗಧಗಿಸಿರುವುದರ ಸಂಕೇತ ಎಂದು ಯಾರು ಬೇಕಾದರೂ ಹೇಳಬಹುದು. ಅಲ್ಲಿ ಬ್ಯಾನರ್ ಎಂಬುದು ಒಂದು ನೆಪ ವಾಗಿದೆಯಷ್ಟೆ. ಕರ್ನಾಟಕದ ಪ್ರಜ್ಞಾವಂತ ಜನರು ಕಳವಳಪಡಬೇಕಾಗಿರುವುದು ಏನೆಂ ದರೆ, ಉತ್ತರ ಭಾರತದ ಮಾದರಿಯಲ್ಲಿ ಗನ್ ಸಂಸ್ಕೃತಿ ರಾಜ್ಯದಲ್ಲೂ ಸದ್ದು ಮಾಡಿರುವುದು. ಕರ್ನಾಟಕ ಹಿಂದೆಲ್ಲಾ ಸಾಕಷ್ಟು ರಾಜಕೀಯ ಘರ್ಷಣೆಗಳನ್ನು ಕಂಡಿದೆ. ಮಚ್ಚು, ಬಡಿಗೆ, ಕೊಡಲಿಗಳನ್ನು ಹಿಡಿದು ಕಾರ್ಯಕರ್ತರು ಹೊಡೆದಾಡಿಕೊಂಡ ಸಾಕಷ್ಟು ನಿದರ್ಶನಗಳಿವೆ. ಆದರೆ ರಾಜಕೀಯ ಪಕ್ಷಗಳ ಬಂಟರ ಅಂಗರಕ್ಷಕರು ಗಲಭೆಯೊಳಗೆ ಸೇರಿಕೊಂಡು ಗುಂಡು ಹಾರಿಸಿರುವುದು, ಅದನ್ನು ನಿಯಂತ್ರಿಸಲು ಪೊಲೀಸರು ಆರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವಂತಹ ಸ್ಥಿತಿ ನಿರ್ಮಾಣವಾಗಿರುವುದನ್ನು ನೋಡಿದರೆ, ರಾಜಕಾರಣ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ರಾಜಕಾರಣದಲ್ಲಿರುವವರು ಮೇಲ್ಪಂಕ್ತಿ ಹಾಕಿಕೊಡಬೇಕು. ಅದು ಬಿಟ್ಟು ನಡುರಸ್ತೆಯಲ್ಲಿ ಗೂಂಡಾಗಳ ರೀತಿ ಹೊಡೆದಾಡಿಕೊಳ್ಳುವುದನ್ನು ನಾಗರಿಕ ಸಮಾಜ ಒಪ್ಪಲು ಆಗುವುದಿಲ್ಲ. ರಾಜಕಾರಣದಲ್ಲಿ ಭಿನ್ನಾಭಿಪ್ರಾಯ ಇರಬೇಕು. ವೈರತ್ವ ಅಲ್ಲ. ಪೋಲೀಸರು ಅದನ್ನು ನಿಯಂತ್ರಿಸಲು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವಂತಹ ಸ್ಥಿತಿ ನಿರ್ಮಾಣವಾಗಿರುವುದನ್ನು ನೋಡಿದರೆ, ರಾಜಕಾರಣ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡುತ್ತದೆ. ಬಹುಶಃ ಇಂತಹ ಘಟನೆಗಳು ಇನ್ನು ಮುಂದೆ ಹೆಚ್ಚಾಗಲೂಬಹುದೇನೋ?
ರಾಮಾಯ ಮಹಾಕಾವ್ಯವನ್ನು ರಚಿಸಿ, ಅದರ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೇ ಬೋಧಿಸಿದವರು ಮಹರ್ಷಿ ವಾಲ್ಮೀಕಿ. ಅಂತಹ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ಕೆತ್ತನೆ ಮಾಡಿರುವುದು ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರುವ ಬಾಲರಾಮಮಂದಿರ ಮೂರ್ತಿಯನ್ನು ಕೆತ್ತನೆ ಮಾಡಿದ ಜಗದ್ವಿಖ್ಯಾತ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್. ಇಂತಹ ಹಿನ್ನೆಲೆಯ ಈ ಕಾರ್ಯಕ್ರಮಕ್ಕೆ ಬಳ್ಳಾರಿಯಲ್ಲಿ ನಡೆದಿರುವ ಘಟನೆ ನಿಜಕ್ಕೂ ಕಪ್ಪುಚುಕ್ಕೆ. ರಾಜಕಾರಣದಲ್ಲಿರುವವರು ಮೇಲ್ಪಂಕ್ತಿ ಹಾಕಿಕೊಡಬೇಕು. ಈ ರೀತಿ ನಡುರಸ್ತೆಯಲ್ಲಿ ಗೂಂಡಾಗಳ ರೀತಿ ಹೊಡೆದಾಡಿಕೊಳ್ಳುವುದನ್ನು ನಾಗರಿಕ ಸಮಾಜ ಒಪ್ಪಲು ಆಗುವುದಿಲ್ಲ. ರಾಜಕಾರಣದಲ್ಲಿ ಭಿನ್ನಾಭಿಪ್ರಾಯ ಇರಬೇಕು. ಅದುವೇ ಪ್ರಜಾಪ್ರಭುತ್ವದ ಸೌಂದರ್ಯ. ಆದರೆ ಆ ಭಿನ್ನಾಭಿಪ್ರಾಯ ವೈರತ್ವದ ರೂಪ ತಾಳಿದಾಗ ಅಮಾಯಕರು ಬಲಿಯಾಗುತ್ತಾರೆ. ಎರಡು ಬಣಗಳ ನಡುವಣ ಕಾದಾಟದಿಂದ ಒಂದು ಜೀವಹರಣವಾಗಿದೆ. ಆ ವ್ಯಕ್ತಿ ಮಾಡಿದ ತಪ್ಪೇನು? ಅವರ ಕುಟುಂಬ ಮಾಡಿದ ಪಾಪ ಏನು? ರಾಜ್ಯದಲ್ಲಿ ಇಂತಹ ಘಟನೆಗಳು ಇನ್ನು ಮುಂದೆ ನಡೆಯಕೂಡದು. ಸರ್ಕಾರ ಬಳ್ಳಾರಿ ಘಟನೆಯನ್ನು ಕಠಿಣವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು.
ಕೃಪೆ ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೩-೦೧-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ಜನವರಿ ೦೩, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬