ಸ್ಟೇಟಸ್ ಕತೆಗಳು (ಭಾಗ ೧೫೫೫) - ನಿಖರತೆ
ಬರಹಗಾರರ ಬಳಗ
ಜನವರಿ ೦೮, ೨೦೨೬
೯ ವೀಕ್ಷಣೆಗಳು
ರಮೇಶನಿಗೆ ಸರಿಯಾಗಿ ತಿಳಿದಿತ್ತು ತಾನು ಹೋಗಬೇಕಾಗಿರುವ ದೂರ ತಲುಪ ಬೇಕಾಗಿರುವ ಎತ್ತರ ಎಲ್ಲವನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದ. ಆದರೆ ತಲುಪಬೇಕಾದ ದಾರಿಯು ಸರಿಯಾಗಿ ಕಂಡ ಮೇಲೆ ನಿಖರವಾಗಿ ತಿಳಿದ ಮೇಲೆ ಆ ಕಡೆಗೆ ಪಯಣವನ್ನು ಬೆಳೆಸಬೇಕು, ಸರಿಯಾಗಿ ಕಾಣದೇ ಹೋದಾಗ ಸಾಗುವ ದಾರಿಯ ಬಗ್ಗೆ ನಿಖರತೆ ಇರೋದಿಲ್ಲ ಹಾಗಾಗಿ ದೃಷ್ಟಿಯನ್ನು ಸರಿ ಮಾಡಬೇಕಿತ್ತು ಹಾಗಾಗಿ ದೃಷ್ಟಿಯನ್ನು ಸರಿಪಡಿಸಿಕೊಂಡು ಹೋಗುವ ದಾರಿ ಮತ್ತು ತಲುಪಬೇಕಾದ ಜಾಗ ಎರಡನ್ನು ಅರ್ಥೈಸಿ ತಿಳಿದುಕೊಂಡ. ತಾನು ತಲುಪಬೇಕಾದ ದೂರಕ್ಕೆ ಇಷ್ಟು ನಿಖರತೆ ಇರುವಾಗ ಜೀವನದ ಗುರಿಯ ಬಗ್ಗೆ ಇನ್ನೆಷ್ಟು ನಿಖರತೆ ಇರಬೇಕು ಅನ್ನೋದು ಅವನಿಗೆ ತಡವಾಗಿ ಅರ್ಥವಾಗಿತ್ತು. ಹಾಗಾಗಿ ಒಂದಷ್ಟು ತಪ್ಪು ನಿರ್ಧಾರಗಳಾಗಿದ್ದವು ಸಮಯ ಕಳೆದುಹೋಗಿತ್ತು ಆದರೂ ಬೇಸರಿಸಿ ಕೊಳ್ಳದೆ ಇದೆಲ್ಲವೂ ಜೀವನದ ಅನುಭವ ಅಂತಂದುಕೊಂಡು ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿ ಹೆಜ್ಜೆ ಇಟ್ಟಿದ್ದ ಈಗ ಅವನಿಗೆ ಯಾವುದೇ ಅಳುಕಿರಲಿಲ್ಲ ಯಾಕೆಂದರೆ ಆತನಿಗೆ ಸರಿಯಾಗಿ ತಿಳಿದಿದ್ದು ತಾನು ಖಂಡಿತ ಆ ಗುರಿಯನ್ನು ತಲುಪುತ್ತೇನೆ ಎಂದು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಜನವರಿ ೦೮, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬