ಭಗವಂತ ನನ್ನ ಯಾವ ಕಾರಣಕ್ಕೆ ಭೂಮಿಗೆ ಕಳುಹಿಸಿದ್ದೀಯಾ? ನನ್ನಿಂದ ಏನಾಗಬೇಕು. ಪ್ರತೀ ದಿನ ನೋವೇ, ಗೆಲುವು ಕಾಣಲು ಎಷ್ಟು ಹೋರಾಟ ನಡೆಸಿದರೂ ಗೆಲುವು ಸಿಗ್ತಾ ಇಲ್ಲ. ಅದಕ್ಕೆ ನೋವಾಗ್ತಿದೆ. ನನ್ನ ಬದುಕಿಗೆ ಕಾರಣವೇನು?  ಮಗೂ ಅರ್ಥ ಮಾಡಿಕೋ... ನೀನು ನಿನ್ನ ಕೆಲಸಗಳಿಗೆ ಬೇರೆ ಬೇರೆ ರೀತಿಯ ಸಲಕರಣೆ ಬಳಸ್ತೀಯಾ ಪ್ರತೀ ಸಲಕರಣೆ ಅವುಗಳ ಕೆಲಸಗಳನ್ನ ನಿರ್ವಹಿಸುತ್ತವೆ... ಹಾಗೆಯೇ ನೀನೂ ಕೂಡಾ ಮಗೂ... ಈ ಭೂಮಿಯಲ್ಲಿ ನೀನೂ ಒಂದು ಸಲಕರಣೆ ನಿನಗೊಪ್ಪುವ ಕೆಲಸ ಸಿಗುವವರೆಗೆ ಕಾಯಬೇಕು. ನೀನು ಸಲಕರಣೆಯಾಗಲು ಒಪ್ಪಿತವಾಗುವ ಕೆಲಸ ಸಿಗುವವರೆಗೂ ಕಾಯಬೇಕು. ಅಷ್ಟೇ ಮಗೂ ನೀನೊಂದು ಸಲಕರಣೆ..ಅದಕ್ಕೆ ಹೊಂದುವ ಕೆಲಸ ಸಿಕ್ಕಾಗ ಮಾತ್ರ ಅದಕ್ಕೆಅರ್ಥ... ಕಾಯಬೇಕು... - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ