ಸ್ಟೇಟಸ್ ಕತೆಗಳು (ಭಾಗ ೧೫೫೯) - ನೀರು
ಬರಹಗಾರರ ಬಳಗ
ಜನವರಿ ೧೨, ೨೦೨೬
೯ ವೀಕ್ಷಣೆಗಳು
ನಿನಗೆ ಮತ್ತೆ ಮತ್ತೆ ಹೇಳ್ತಾ ಇದ್ದೇನೆ. ನೀನು ನಿನ್ನ ದಿನಚರಿಯನ್ನು ಸರಿ ಮಾಡುವುದಕ್ಕೆ ಪ್ರತಿದಿನ ನನ್ನ ಬುಡಕ್ಕೆ ನೀರು ಹಾಕ್ತಾ ಇದ್ದೀಯಾ? ಹಾಕಬೇಕು ಅಂತ ಅಂದುಕೊಂಡಿದ್ದೀಯಾ? ಯಾಕೆಂದರೆ ನಾನು ಎಷ್ಟು ದಿನ ನನ್ನ ಬೇರನ್ನು ಆಳಕ್ಕಿಳಿಸಿದ್ದೆ ಕಷ್ಟಪಟ್ಟು ನೀರು ಪಡೆದುಕೊಳ್ಳುತ್ತಿದ್ದೆ ಆದರೆ ನೀನು ನೀರು ನೀಡುವುದಕ್ಕೆ ಆರಂಭ ಮಾಡಿದ ಮೇಲೆ ನನಗೆ ಬದುಕು ಸುಲಭ ಅಂತ ಅನ್ನಿಸಿತು. ನನ್ನ ಬೇರಿಳಿಸಿದಾಕಾರ ಆಳದಿಂದು ನೀರು ಸಿಕ್ತಾ ಇತ್ತು, ನಾನು ಆ ನೀರನ್ನು ಪಡೆದುಕೊಂಡು ನನ್ನ ಬದುಕನ್ನು ವಿಸ್ತರಿಸಿಕೊಂಡೆ .ನಾನು ತುಂಬಾ ಸೊಂಪಾಗಿ ಬೆಳೆಯೋದಕ್ಕೆ ಪ್ರಾರಂಭ ಮಾಡಿದೆ. ಈಗೀಗ ನೀನು ನೆನೆಪಾದಾಗ ಮಾತ್ರ ನೀರು ಹಕ್ತಾ ಇದ್ದೀಯಾ? ನಾನು ಆ ನೀರನ್ನ ಪಡೆದುಕೊಳ್ಳಬೇಕೋ ಬಿಡಬೇಕು ಗೊತ್ತಾಗ್ತಾ ಇಲ್ಲ. ತಪ್ಪು ನನ್ನದೇ, ನಾನು ನೀನು ನೀರು ಹಾಕ್ತಾ ಇದ್ದೀಯಾ ಅಂತ ಅಂದುಕೊಂಡು ಬದುಕು ಕಟ್ಟಿಕೊಳ್ಳಲು ಪ್ರಾರಂಭ ಮಾಡಿದೆ ನೋಡು ಅದು ತಪ್ಪು. ನಾನು ನನ್ನ ಬೇರುಗಳನ್ನ ನಂಬಿ ಚಿಕ್ಕ ನೀರಿನಿಂದ ಬದುಕು ಕಟ್ಟಿಕೊಳ್ಳುತ್ತೇನೆ, ನಿನ್ನನ್ನ ನಂಬಿ ಅಲ್ಲ. ಇದು ನಿನ್ನ ಜೀವನದಲ್ಲೂ ಅನುಭವ ಆಗುತ್ತೆ. ಗಿಡ ಮೌನವಾಯಿತು ನಾನು ಪ್ರತಿದಿನ ನೀರು ಹಾಕಬೇಕು ಅಂತ ಮತ್ತೆ ಅಂದುಕೊಂಡೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಜನವರಿ ೧೨, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬