ಸ್ಟೇಟಸ್ ಕತೆಗಳು (ಭಾಗ ೧೫೬೦) - ಶಿಕ್ಷಣ
ಬರಹಗಾರರ ಬಳಗ
ಜನವರಿ ೧೩, ೨೦೨೬
೭ ವೀಕ್ಷಣೆಗಳು
ಬಸ್ಸಿನ ಕಿಟಕಿಯ ಪಕ್ಕದಲ್ಲಿ ಕುಳಿತಿದ್ದ ಮೊಮ್ಮಗನಿಗೆ ಅಜ್ಜ ಬೈಯ್ಯುತ್ತಾ ಇದ್ರು, ಯಾಕೆ ಸಿಕ್ಕ ಸಿಕ್ಕಲ್ಲೆಲ ಕಸ ಬಿಸಾಕ್ತಿ. ಅದರಿಂದ ಪರಿಸರ ಹಾಳಾಗುತ್ತೆ ಎಲ್ಲರಿಗೂ ತೊಂದರೆ ಆಗುತ್ತೆ ನೀನು ಬಿಸಾಕಿದ ಕಸವನ್ನು ನೀನೆ ಹಿಡಿದುಕೊಂಡು ಕಸದ ಬುಟ್ಟಿಗೆ ಎಸೆಯೋಕೆ ಆಗುವುದಿಲ್ಲವೇ? ದಾರಿಯ ಕಂಡಲ್ಲೆಲ್ಲ ಉಗುಳುವುದು ಕಸ ಬಿಸಾಕೋದು ಒಳ್ಳೆಯದಲ್ಲ. ಮೊಮ್ಮಗನ ಉತ್ತರವೂ ತಯಾರಾಗಿತ್ತು, ನಾನು ಒಬ್ಬ ಕಸ ಬಿಸಾಕುವುದರಿಂದ ಏನು ದೊಡ್ಡ ಸಮಸ್ಯೆ ಆಗೋದಿಲ್ಲ, ನಾನು ನಿಲ್ಲಿಸಿದರೂ ಕೂಡ ಅಷ್ಟೇನೂ ದೊಡ್ಡ ಬದಲಾವಣೆ ಆಗುವುದಿಲ್ಲ. ಹಾಗಾಗಿ ನಾನು ಬಿಸಾಕಿರೋದ್ರಲ್ಲಿ ಏನೂ ತಪ್ಪಿಲ್ಲ .
ಆದರೂ ಮಗಾ, ನಮ್ಮ ಪರಿಸರವನ್ನ ನಾವು ಸ್ವಚ್ಛವಾಗಿಡಬೇಕು ಅದು ನಮ್ಮ ಜವಾಬ್ದಾರಿ, ಬೇರೆಯವರು ಮಾಡ್ತಾರೆ. ಅನ್ನೋ ಕಾರಣಕ್ಕೆ ನಾವು ಮಾಡೋದಲ್ಲ, ಶಿಕ್ಷಣ ಪಡೆಯದ ಅಜ್ಜ ಎಷ್ಟು ಹೇಳಿದರು ಕೂಡ ಶಿಕ್ಷಣ ಪಡೆದ ಮೊಮ್ಮಗನ ಕೆಲಸ ಹಾಗೆ ಮುಂದುವರೆದಿತ್ತು. ತರಗತಿಯ ಗೋಡೆಗಳು, ಕಪ್ಪುಹಲಗೆಗಳು ತಾವು ಕಲಿಸಿದ ಪಾಠಕ್ಕೆ ಬೇಸರಿಸಿಕೊಂಡವು
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಜನವರಿ ೧೩, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬