ಕನ್ನಡ ಪತ್ರಿಕಾ ಲೋಕ (ಭಾಗ ೨೪೩) - ಸಂವಾದ
ಶ್ರೀರಾಮ ದಿವಾಣ
ಜನವರಿ ೧೯, ೨೦೨೬
೧೯ ವೀಕ್ಷಣೆಗಳು
ಇಂದೂಧರ ಹೊನ್ನಾಪುರ ಅವರ "ಸಂವಾದ"
ಹಿರಿಯ ಪತ್ರಕರ್ತರೂ, ರಾಜ್ಯದ ದಲಿತ ಸಂಘರ್ಷ ಸಮಿತಿಯ ನಾಯಕರಲ್ಲೊಬ್ಬರೂ ಆಗಿರುವ ಇಂದೂಧರ ಹೊನ್ನಾಪುರ ಅವರು ಕಳೆದ ೨೩ ವರ್ಷಗಳಿಂದ ಬೆಂಗಳೂರಿನಿಂದ ನಿರಂತರವಾಗಿ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ "ಸಂವಾದ". ಬೆಂಗಳೂರು ಮಾಗಡಿ ರಸ್ತೆಯ ಅಂಜನಾ ನಗರ 'ಸ್ಪೂರ್ತಿಧಾಮ'ದಿಂದ ಪ್ರಕಾಶನಗೊಳ್ಳುವ ಸಂವಾದದ ಮುದ್ರಕರು ಮತ್ತು ಪ್ರಕಾಶಕರು ಎಸ್. ಆರ್. ಗೋವಿಂದು.
ಡಾ || ನಟರಾಜ್ ಹುಳಿಯಾರ್, ಪ್ರೊ. ರಹಮತ್ ತರೀಕೆರೆ, ಡಾ || ಕೆ. ಪುಟ್ಟಸ್ವಾಮಿ, ಡಾ || ಡಿ. ಡೊಮಿನಿಕ್, ಡಾ || ಬಿ. ಯು. ಸುಮಾ, ಡಾ || ಜಿ. ಪಾಂಡು ನಾಯಕ್, ಎನ್. ಕೆ. ಹನುಮಂತಯ್ಯ, ಬಿ.ಶ್ರೀಪಾದ್ ಭಟ್, ಡಾ || ಅರುಣ್ ಜೋಳದಕೂಡ್ಲಗಿ ಹಾಗೂ ವಿ. ಎಲ್. ನರಸಿಂಹಮೂರ್ತಿ ಇವರು ಸಂಪಾದಕೀಯ ಬಳಗದ ಸದಸ್ಯರಾಗಿದ್ದಾರೆ.
ದಲಿತ, ಪ್ರಗತಿಪರ, ಜನಪರ ಹೋರಾಟಗಾರರು, ಲೇಖಕರಲ್ಲಿ ಪ್ರಮುಖರೆನ್ನಿಸಿಕೊಂಡವರ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಚಿಂತನೆಗಳು, ವಿಶ್ಲೇಷಣೆಗಳು, ವಿಮರ್ಶಾತ್ಮಕ ಬರೆಹಗಳು, ವೈಚಾರಿಕ, ವೈಜ್ಞಾನಿಕ, ಮೌಢ್ಯ ವಿರೋಧಿ ಲೇಖನಗಳು, ಕಥೆ, ಕವನಗಳು, ಅನುವಾದಿತ ಬರೆಹಗಳು ಸಂವಾದದಲ್ಲಿ ಆದ್ಯತೆಯಲ್ಲಿ ಪ್ರಕಟವಾಗುತ್ತವೆ.
ಓದುಗರ "ಪತ್ರಗಳು", " ಹೊಸ ಪುಸ್ತಕ"ಗಳ ಪರಿಚಯ, "ಪುಸ್ತಕ ಅವಲೋಕನ", ಇಂದೂಧರರ "ಸಂಪಾದಕೀಯ", "ಸಂಪಾದಕರೊಡನೆ ಸಂವಾದ"ವೆಂಬ ವಿಮರ್ಶೆ, ಚಂದ್ರಭಾನ್ ಪ್ರಸಾದ್ ರವರ " ದಲಿತ್ ಡೈರಿ", "ಬುದ್ಧಾಯಣ" ಇತ್ಯಾದಿ ಖಾಯಂ ಅಂಕಣ ಬರೆಹಗಳಿವೆ. ೫೨ ಪುಟಗಳ (ತರಂಗ / ಸುಧಾ ಆಕಾರ) "ಸಂವಾದ"ದ ಬಿಡಿ ಸಂಚಿಕೆಯ ಬೆಲೆ ೪೦ ರೂಪಾಯಿ. ವಾರ್ಷಿಕ ಚಂದಾ ಮೊತ್ತ ೪೫೦ ರೂಪಾಯಿ. ೩ ವರ್ಷಕ್ಕೆ ೧೪೦೦, ೫ ವರ್ಷಕ್ಕೆ ೨೩೦೦ ಮತ್ತು ಆಜೀವ ಚಂದಾ ೨೫ ಸಾವಿರ ರೂಪಾಯಿಗಳಾಗಿವೆ.
~ ಶ್ರೀರಾಮ ದಿವಾಣ
ಪ್ರಕಟಿಸಿದ: ಜನವರಿ ೧೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬