ಸ್ಟೇಟಸ್ ಕತೆಗಳು (ಭಾಗ ೧೫೭೭) - ನಗರ
ಬರಹಗಾರರ ಬಳಗ
ಜನವರಿ ೩೦, ೨೦೨೬
೧೧ ವೀಕ್ಷಣೆಗಳು
ದೊಡ್ಡ ದೊಡ್ಡ ಹೆಸರಿನ ಊರುಗಳೇ… ನೀವೆಲ್ಲರೂ ಹೆಸರಿನಿಂದ ಪ್ರಖ್ಯಾತರಾದವರಲ್ಲ, ಇಲ್ಲಿ ಬದುಕುತ್ತಿರುವ ಜನ ಅವರಿಂದಾಗಿ ನೀವು ರೂಪಗೊಂಡದ್ದು. ರೂಪುಗೊಂಡ ಮೇಲೆ ನಿಮ್ಮದೇ ಒಂದು ಅಹಂಕಾರವನ್ನು ಹೊಂದಿದೀರಲ್ಲ ಇಲ್ಲಿ ಶ್ರೀಮಂತರು ಬದುಕ್ತಾರೆ ಬಡವರು ಬದುಕ್ತಾರೆ ಗೆದ್ದವನು ಸೋತವನು ಪ್ರತಿಯೊಬ್ಬರಿಗೂ ತಮ್ಮ ದಿನವನ್ನು ಸಾಗಿಸಿಕೊಳ್ಳೋದ್ದಕ್ಕೆ ಈ ನಗರಕ್ಕೆ ಬಂದುಬಿಟ್ಟಿದ್ದಾರೆ. ಕೆಲವೊಂದು ಕಾರಣಕ್ಕೆ ನೀವು ಬೆಳೆದು ನಿಂತಿರಬಹುದು ಆದರೆ ನಿಮ್ಮ ನೆಲದಲ್ಲಿ ಹೆಜ್ಜೆ ಇಟ್ಟು ಬದುಕುತ್ತಿರುವ ಪ್ರತಿಯೊಬ್ಬರನ್ನ ಗೌರವಿಸುವುದನ್ನು ಕಲಿತುಕೊಳ್ಳಿ.
ಈಗ ನಿನ್ನ ಪ್ರಕಾರ ನಾವು ಗೌರವ ನೀಡುತ್ತಿಲ್ಲ ಅಂತನಾ. ಪ್ರತಿಯೊಬ್ಬರನ್ನ ಒಂದೇ ತೆರನಾಗಿ ನೋಡ್ತೇವೆ. ಪ್ರತಿಯೊಬ್ಬರಿಗೂ ಅವಕಾಶಗಳನ್ನು ಕೊಡುತ್ತೇವೆ ಅವರವರು ಅವರವರ ದಾರಿಗಳನ್ನ ಸೃಷ್ಟಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿ ನಾಗರಿಕರು ಇದ್ದಾರೆ, ಆನಾಗರಿಕರು ಇದ್ದಾರೆ ಪ್ರಾಮಾಣಿಕತೆಯಲ್ಲಿ ಬದುಕು ಕಟ್ಟಿಕೊಂಡವರು ಇದ್ದಾರೆ ನಾನು ನನ್ನ ಶಹರವನ್ನ ಕಟ್ಟಿಕೊಂಡ ಬಗೆ ನನಗೆ ತಿಳಿದಿದೆ ನೀನು ನಿನ್ನ ಬದುಕನ್ನ ಕಟ್ಟಿಕೋ ನಾನು ಯಾವತ್ತೂ ನಿರ್ಭಾವುಕ ಯಾರಿಗೂ ಹೆಚ್ಚು ಅವಕಾಶ ಕಡಿಮೆ ಅವಕಾಶನ ನೀಡುವವನಲ್ಲ ತಿಳಿದುಕೋ… ನಗರದ ಮಾತಿಗೆ ನನ್ನಿಂದ ಉತ್ತರವಿರಲಿಲ್ಲ
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಜನವರಿ ೩೦, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬