ಸ್ಟೇಟಸ್ ಕತೆಗಳು (ಭಾಗ ೧೫೭೮) - ಯಂತ್ರ
ಬರಹಗಾರರ ಬಳಗ
ಜನವರಿ ೩೧, ೨೦೨೬
೧೩ ವೀಕ್ಷಣೆಗಳು
ನಿಮ್ಮಲ್ಲೇನಾದ್ರೂ ಯಂತ್ರ ಒಂದಿದ್ದರೆ ಕಳುಹಿಸಿಕೊಡಿ. ತುಂಬಾ ಅಗತ್ಯವಾಗಿ ತುರ್ತಾಗಿ ಬೇಕಾಗಿದೆ. ಆ ಯಂತ್ರ ಮಾಡಬೇಕಾಗಿರುವ ಕೆಲಸವೇನೆಂದರೆ ಈ ಮನಸ್ಸಿಗಾಗಿರುವ ಸುಸ್ತನ್ನ ಅಳಿಯಬೇಕು ದೇಹಕ್ಕಾಗಿರುವ ಸುಸ್ತು ಕಾಣುತ್ತದೆ, ಆದರೆ ಮನಸ್ಸಿಗಾಗಿರುವ ಸುಸ್ತನ್ನ ಎಲ್ಲೂ ವ್ಯಕ್ತಪಡಿಸುವುದಕ್ಕಾಗುವುದಿಲ್ಲ, ಅದು ಯಾರ ಕಣ್ಣಿಗೂ ಕಾಣುವುದಿಲ್ಲ. ಅದನ್ನ ತಿಳಿದುಕೊಂಡು ನಮ್ಮ ಮನಸ್ಸಿಗೊಂದಿಷ್ಟು ವಿಶ್ರಾಂತಿ ಇಡುವ ಕೆಲಸವಾಗಬೇಕು. ಹಾಗಾಗಿ ಆ ಯಂತ್ರದ ಹುಡುಕಾಟದಲ್ಲಿ ಇದ್ದೇನೆ ಎಲ್ಲಾದರೂ ಇದ್ದರೆ ದಯವಿಟ್ಟು ಕಳುಹಿಸಿಕೊಡಿ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಜನವರಿ ೩೧, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬