ನನ್ನನ್ನ ಯಾಕೆ ಯಾರು ಆಯ್ಕೆ ಮಾಡಿಕೊಳ್ಳುವುದಿಲ್ಲ? ನಾನು ಯಾರಿಗೂ ಇಷ್ಟವಾಗುವುದಿಲ್ಲ ಅನ್ಸುತ್ತೆ. ನನ್ನನ್ನ ಪ್ರತಿಯೊಬ್ಬರು ಬಂದು ನೋಡ್ತಾರೆ ಅಳತೆಗೆ ನಾನು ಬೇಕು ದೇಹಕ್ಕೆ ಹೊಂದಿಕೊಳ್ಳುತ್ತೋ ಅನ್ನೋದು ನೋಡೋದಕ್ಕೆ ನಾನು ಬೇಕು ಆದರೆ ಕೊನೆಗೆ ಆಯ್ಕೆ ನನ್ನದೇ ಆಕಾರದ ಬಣ್ಣ ಬೇರೆಯಾಗಿರುವ ಇನ್ನೊಬ್ಬನ ಆರಿಸಿಕೊಂಡು ಹೋಗ್ತಾನೆ. ಇದೇ ಬಟ್ಟೆ ಅಂಗಡಿಗೆ ಬಂದು ವರ್ಷಗಳ ದಾಟಿತು. ನಾನು ಹಲವು ದೇಹವನ್ನು ಅಪ್ಪಿಕೊಂಡು ಬದಿಗೆ ಸರಿದು ಬಿಟ್ಟಿದ್ದೇನೆ. ನನ್ನಿಂದಾಗಿ ನನ್ನ ಗೆಳೆಯರೆಲ್ಲರೂ ಮಾರಾಟವಾಗಿದ್ದಾರೆ  ಅಂತ ಖುಷಿ ಪಡ್ಲಾ ಅಥವಾ ನನ್ನ ಸುತ್ತಮುತ್ತಲಿದ್ದವರೆಲ್ಲರೂ ಕೂಡ ಯಾರ್ಯಾರದ್ದೋ ದೇಹದಲ್ಲಿ ಸುಂದರವಾಗಿ ಕಂಗೊಳಿಸುತ್ತಿದ್ದಾರೆ ನನಗಿನ್ನು ಭಾಗ್ಯ ಸಿಕ್ಕಿಲ್ಲ ಅಂತ ನೋವು ಪಡ್ಲಾ? ಈ ಎರಡು ದ್ವಂದದ ನಡುವೆ ಇನ್ನೂ ಸಪಾಟಿನ ಮೂಲೆಯಲ್ಲಿ ಕುಳಿತುಬಿಟ್ಟಿದ್ದೇನೆ. ನೀವಾದರೂ ಬಂದ ನನ್ನ ಖರೀದಿ ಮಾಡಿ  ಹೀಗೊಂದು ಶರ್ಟು ನೋವಿನಿಂದ ಹೇಳಿದ ಕಾರಣ ಅದನ್ನೇ ಆರಿಸಿಕೊಂಡು ಮನೆಗೆ ಎತ್ತಿಕೊಂಡು ಬಂದೆ ನಾನು ಅದರಲ್ಲಿ ತುಂಬಾ ಚೆಂದ ಕಾಣುತ್ತೇನೆ ಅಂತ ಅಮ್ಮ ಹೇಳಿದ್ರು. - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ