ಕನ್ನಡ ಪತ್ರಿಕಾ ಲೋಕ (ಭಾಗ ೨೪೬) - ಶೋಧ
ಶ್ರೀರಾಮ ದಿವಾಣ
ಫೆಬ್ರವರಿ ೦೮, ೨೦೨೬
೮ ವೀಕ್ಷಣೆಗಳು
ಉಜಿರೆ ಎಸ್ ಡಿ ಎಂ ಕಾಲೇಜು ಹಾಮಾನಾ ಸಂಶೋಧನಾ ಕೇಂದ್ರದ "ಶೋಧ"
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಇದರ ಡಾ. ಹಾಮಾನಾ ಸಂಶೋಧನ ಕೇಂದ್ರವು ಪ್ರಕಟಿಸುವ ಕನ್ನಡ ಮತ್ತು ಇಂಗ್ಲೀಷ್ ದ್ವಿಭಾಷಾ ಅರ್ಧ ವಾರ್ಷಿಕ ಪತ್ರಿಕೆಯಾಗಿದೆ "ಶೋಧ".
ಹದಿನೈದು ವರ್ಷಗಳ ಹಿಂದೆ ಆರಂಭವಾದ "ಶೋಧ" ಪುಸ್ತಕದ ರೂಪದಲ್ಲಿ ಬರುತ್ತಿದೆ. ೨೨೪ ಪುಟಗಳ ಶೋಧದ ಬಿಡಿ ಸಂಚಿಕೆಯ ಬೆಲೆ ೧೫೦ ರೂಪಾಯಿ. ಐದು ವರ್ಷಗಳ ಚಂದಾ (ಹತ್ತು ಸಂಚಿಕೆಗಳು) ಮೊತ್ತ ಸಂಸ್ಥೆಗಳಿಗಾದರೆ ೧೫೦೦ ರೂ. ಮತ್ತು ಲೇಖಕರಿಗಾದರೆ ೨೫೦೦ ರೂಪಾಯಿ. ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದು "ಶೋಧ"ದ ಮೊದಲ ಆದ್ಯತೆಯಾಗಿದೆ. ಪತ್ರಿಕೆ ಉಜಿರೆಯ ಮಂಜುಶ್ರೀ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತದೆ.
ಪ್ರಸ್ತುತ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್. ಗೌರವ ಸಂಪಾದಕರು. ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಪ್ರಧಾನ ಸಂಪಾದಕರು. ಡಾ. ಹಾಮಾನಾ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಡಾ. ದಿವಾಕರ ಕೆ. ಕಾರ್ಯನಿರ್ವಾಹಕ ಸಂಪಾದಕರು. ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗಣ್ಣ ಡಿ. ಎ. ಸಹ ಕಾರ್ಯನಿರ್ವಾಹಕ ಸಂಪಾದಕರು. ಇಂಗ್ಲೀಷ್ ಸಹಾಯಕ ಪ್ರಾಧ್ಯಾಪಕರಾದ ಡಾ. ಮಂಜುಶ್ರೀ ಆರ್., ಮನಃಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಂದನಾ ಜೈನ್, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಗಣರಾಜ ಕೆ. ಹಾಗೂ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸೌಮ್ಯಾ ಬಿ. ಪಿ. ಸಹ ಸಂಪಾದಕರಾಗಿದ್ದಾರೆ. ನವದೆಹಲಿಯ ಜವಾಹರಲಾಲ್ ನೆಹರು ವಿವಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ರಮೇಶ್ ಸಾಲಿಯಾನ್, ಹೊಳೆಹೊನ್ನೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಭಾರತಿದೇವಿ ಪಿ., ಹಂಪಿ ಕನ್ನಡ ವಿವಿ ಅಭಿವೃದ್ಧಿ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಪ್ರಶಾಂತ್ ಹೆಚ್. ಡಿ., ಧಾರವಾಡದ ಇಂಗ್ಲೀಷ್ ವಿಭಾಗದ ಡಾ. ಶಶಿಕಾಂತ ಎಸ್. ಕುರೋಡಿ, ಬೆಂಗಳೂರಿನ ಪ್ರೊಫೆಸರ್ ಡಾ. ಕೆ. ಎನ್. ಚಿದಂಬರಮೂರ್ತಿ, ಮಂಗಳೂರು ವಿವಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ ಹಾಗೂ ಮೈಸೂರು ಜಿ. ಎಸ್. ಎಸ್. ಎಸ್., ಎಸ್. ಎಸ್. ಎಫ್. ಜಿ. ಕಾಲೇಜು ಪ್ರಾಂಶುಪಾಲರಾದ ಡಾ. ರಾಕೇಶ್ ಟಿ. ಎಸ್. ಇವರುಗಳು ವಿಷಯಪರಿಣಿತರಾಗಿದ್ದಾರೆ.
~ ಶ್ರೀರಾಮ ದಿವಾಣ
ಪ್ರಕಟಿಸಿದ: ಫೆಬ್ರವರಿ ೦೮, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬