ಸ್ಟೇಟಸ್ ಕತೆಗಳು (ಭಾಗ ೧೫೮೭) - ಪೊಲೀಸ್
ಬರಹಗಾರರ ಬಳಗ
ಫೆಬ್ರವರಿ ೦೯, ೨೦೨೬
೫ ವೀಕ್ಷಣೆಗಳು
ಬಿಸಿಲು ಹೆಚ್ಚಾಗುತ್ತಿದೆ. ತಲೆ ಸುಡುತ್ತಿದೆ ಆದರೆ ನಿಂತ ಸ್ಥಳದಿಂದ ಕಡೆ ಚಲಿಸುವ ಹಾಗಿಲ್ಲ. ಮೇಲಾಧಿಕಾರಿಗಳಿಂದ ಅಧಿಕಾರಯುತ ಮಾತು ಸಿಕ್ಕಿದೆ. ಈ ಸ್ಥಳದ ಜವಾಬ್ದಾರಿ ನನ್ನದಂತೆ. ಕೈಯಲ್ಲಿ ಒಂದು ಕೋಲು ಹಿಡಿದು ನಿಲ್ಲಿಸಿ ಬಿಟ್ಟಿದ್ದಾರೆ, ಇತ್ತೀಚಿಗೆ ರಸ್ತೆ ಅಗಲೀಕರಣದ ಕೆಲಸಕ್ಕೆ ಇಲ್ಲೊಂದು ಕಡೆ ತಿರುವೊಂದನ್ನ ನಿರ್ಮಿಸಿದ್ದಾರೆ. ಹತ್ತಿರವಾಗುತ್ತೆ ಮನೆಗೆ ಅನ್ನುವ ಕಾರಣಕ್ಕೆ ವಿರುದ್ಧ ದಿಕ್ಕಿನಲ್ಲಿ ಗಾಡಿಗಳು ಈ ರಸ್ತೆ ಮೂಲಕ ಹಾದು ಹೋಗುತ್ತದೆ ಅದು ಹೋಗಬಾರದೆನ್ನುವ ಕಾರಣಕ್ಕೆ ಬಿಸಿಲಲ್ಲಿ ನನ್ನ ನಿಲ್ಲಿಸಿದ್ದಾರೆ.ನಾನು ನಿಂತಿರುವ ಕಾರಣಕ್ಕೆ ಜನ ಇಲ್ಲಿ ಬರೋದಿಲ್ಲ ಗಾಡಿಗಳು ಇತ್ತ ಕಡೆ ಬರುವುದಿಲ್ಲ ಆದರೆ ನಾನು ಮಾಯವಾಗಿ ಬಿಟ್ಟರೆ ಎಲ್ಲಾ ಗಾಡಿಗಳು ಎಲ್ಲಿಂದಲೇ ಚಲಿಸೋದಕ್ಕೆ ಪ್ರಾರಂಭವಾಗುತ್ತದೆ. ಆದರೆ ಜನರಿಗೆ ಅರ್ಥವಾಗುತ್ತಿಲ್ಲ ಮತ್ತೆ ಮತ್ತೆ ನಾನಿಲ್ಲದ ಕ್ಷಣದಲ್ಲಿ ಬಂದು ಜೀವವನ್ನು ಕಳೆದುಕೊಂಡವರಿದ್ದಾರೆ, ಅಂಗಗಳನ್ನು ಊನ ಮಾಡಿಕೊಂಡು ಬಿಡುತ್ತಾರೆ, ನಾನು ಹಗಲು ರಾತ್ರಿ ಕಷ್ಟ ಪಟ್ಟು ಪರೀಕ್ಷೆ ಬರೆದು ಪೋಲೀಸ್ ಕೆಲಸಕ್ಕೆ ಸೇರಿದ್ದು ಬರಿಯ ನಿಮ್ಮ ಭಯ ಸೃಷ್ಟಿಗಾ? ಉತ್ತರ ಕೊಡಿ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಫೆಬ್ರವರಿ ೦೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬