ಸ್ಟೇಟಸ್ ಕತೆಗಳು (ಭಾಗ ೧೫೮೮) - ಅವಳು
ಬರಹಗಾರರ ಬಳಗ
ಫೆಬ್ರವರಿ ೧೦, ೨೦೨೬
೧೧ ವೀಕ್ಷಣೆಗಳು
ಅವಳು ಕಣ್ಣೀರು ಇಳಿಸಿದ್ದಾಳೆ. ದೊಡ್ಡ ಚಲನಚಿತ್ರ ಪರದೆಯ ಕೆಳಗೆ ಕುಳಿತು ಅವಳನ್ನೆ ಅವಳು ನೋಡಿಕೊಂಡಿದ್ದಾಳೆ. ಹಲವು ವರ್ಷಗಳ ಹಿಂದೆ ಅವಳಿಗೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುವ ಆಸೆ. ಬದುಕಿನ ದಾರಿಯ ಬಗ್ಗೆ ದೃಢವಾದ ಯೋಚನೆ ಇರಲಿಲ್ಲವಾದ್ದರಿಂದ ಅವಕಾಶ ತೆಗೆದುಕೊಂಡು ಅಭಿನಯಿಸಿದ್ದಳು ಕೂಡ. ಆದರೆ ಬದುಕು ಇನ್ನೊಂದು ದಿಕ್ಕನ್ನ ಪಡೆದುಕೊಂಡು ಹೊರಟು ಹೋಗಿತ್ತು ಚಲನಚಿತ್ರವು ನಿಂತೆ ಹೋಗಿತ್ತು. ಮತ್ತೆ ಪರದೆಯ ಮೇಲೆ ಬಿತ್ತರವಾದಾಗ ಆಕೆ ಹೊಸ ಉದ್ಯೋಗದಲ್ಲಿ ಮುಳುಗಿ ಹೋಗಿದ್ದಳು. ಜನರಿಲ್ಲದ ಚಿತ್ರಮಂದಿರದಲ್ಲಿ ಕುಳಿತು ತನ್ನಲ್ಲೆ ನೋಡಿಕೊಂಡು ಕಣ್ಣೀರು ಹಾಕಿದ್ದಳು. ಬದುಕು ಹೇಳಿದ ಕಡೆಗೆ ಸಾಗಿ ಬಿಡಬೇಕು. ಅಭಿನಯದ ಪುಟ್ಟ ಮಗುವಿಗೆ ಆಗಾಗ ಅವಕಾಶಗಳನ್ನು ಕೊಡಬೇಕು ಅಂತ ಯೋಚಿಸಿಕೊಂಡಿದ್ದಾಳೆ ಅಷ್ಟೇ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಫೆಬ್ರವರಿ ೧೦, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬