ಸ್ಟೇಟಸ್ ಕತೆಗಳು (ಭಾಗ ೧೫೯೦) - ನಾಯಕ
ಬರಹಗಾರರ ಬಳಗ
ಫೆಬ್ರವರಿ ೧೨, ೨೦೨೬
೧೧ ವೀಕ್ಷಣೆಗಳು
ರಮೇಶನಿಗೆ ಮತ್ತದೇ ಯೋಚನೆ, ಹಲವು ಸಮಯದಿಂದ ಅವನಿಗೆ ಇದೇ ಪ್ರಶ್ನೆ ಓಡುತ್ತಿತ್ತು. ಯಾವುದೇ ಕಾರ್ಯಕ್ರಮ ಆರಂಭವಾಗುವಾಗ ಅಪ್ಪ ಎಲ್ಲೂ ಕಾಣೋದಿಲ್ಲ. ಕಾರ್ಯಕ್ರಮಕ್ಕೆ ಮೊದಲು ತಯಾರಿಗೆ ಅಂತ ಒಂದು ವಾರದ ಕೆಲಸ ಅವರದು. ಕಾರ್ಯಕ್ರಮ ಚೆಂದವಾಗುವುದಕ್ಕೆ ರಾತ್ರಿಹಗಲು ಬೆವರು ಸುರಿಸುತ್ತಾರೆ, ಆದರೆ ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಕಾಣೋದಿಲ್ಲ, ಕಾರ್ಯಕ್ರಮ ಮಾಡಿದವರು ಅವರ ಹೆಸರು ಹೇಳೋದು ಇಲ್ಲ. ಹಾಗಾಗಿ ನಾನು ವೇದಿಕೆ ಏರಬೇಕೆಂಬ ತೀರ್ಮಾನಕ್ಕೆ ಬಂದಿದ್ದೇನೆ, ನಾನು ವೇದಿಕೆ ಹಿಂದಿಗಿಂತ ವೇದಿಕೆಯ ಮುಂದೆ ಬರುವ ಕೆಲಸ ಮಾಡುತ್ತೇನೆ ಈ ದೃಢ ನಿರ್ಧಾರದಿಂದ ಇನ್ನೊಬ್ಬ ನಾಯಕನ ಉಗಮವಾಯಿತು.
.- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಫೆಬ್ರವರಿ ೧೨, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬