ಅವನನ್ನ ಬುದ್ಧಿಮಾಂದ್ಯ ಎನ್ನುತ್ತಾರೆ ಆತ ಯಾರಿಗೂ ತೊಂದರೆ ಕೊಡುವವನಲ್ಲ ಅವನು ಅವನ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾನೆ. ಕೆಲವೊಂದು ಕೆಲಸಗಳು ಆತನಿಗೆ ಅರ್ಥವಾಗುವುದಿಲ್ಲ ಅಷ್ಟೇ ಆದರೆ ಎಲ್ಲಾ ತಿಳಿದಿದ್ದವರೇ ಏನು ಮಾಡುತ್ತಿದ್ದಾರೆ ಕಸವನ್ನ ಚೆಲ್ಲಬೇಡಿ ಅಂದ ಕಡೆ ಕಸ ಚೆಲ್ಲುತ್ತಾರೆ. ನದಿ ರಸ್ತೆ ಬದಿಯಲ್ಲೆಲ್ಲಾ ಗಲೀಜು ಮಾಡ್ತಾರೆ. ದುಡ್ಡಿನಿಂದ ಮೋಸ ಮಾಡುತ್ತಾರೆ, ಇನ್ನೊಬ್ಬರ ಬಗ್ಗೆ ಅಸೂಯೆ ಪಡುತ್ತಾರೆ, ಭ್ರಷ್ಟಾಚಾರ ಮಾಡಿ ಯಾರದೋ ಹೆಸರಿನಲ್ಲಿ ಮೋಜು ಮಸ್ತಿ ಮಾಡುತ್ತಾರೆ, ಪ್ರೀತಿಯ ಹೆಸರಿನಲ್ಲಿ ಮೋಸ ಮಾಡ್ತಾರೆ, ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ, ಬೆದರಿಸುತ್ತಾರೆ, ಸಾಯುತ್ತಾರೆ, ಸಾಯಿಸುತ್ತಾರೆ. ಹಾಗಾದರೆ ನಿಜವಾದ ಬುದ್ಧಿಮಾಂದ್ಯರು ಯಾರು? ಪ್ರಶ್ನೆಯೊಂದು ಓಡುತ್ತಿದೆ ಉತ್ತರ ನಿಮ್ಮಿಂದ ಬೇಕಾಗಿದೆ...ಹೀಗಂದ ಗಗನ್ ಗೆ ಉತ್ತರ ಕೊಡೋಕ್ಕಾಗದೆ ಮೌನವಾದೆ. - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ