ಅವರಿಗೆ ಕೇಳುವವರು ಬೇಕಾಗಿದ್ದಾರೆ, ಹಳೆಯ ಕತೆಗಳನ್ನು ಪ್ರೀತಿಯ ನೆನೆಪುಗಳನ್ನು, ಬದುಕಿನ ಅನುಭವಗಳನ್ನು, ದೊಡ್ಡ ಕನಸುಗಳನ್ನ ಹೀಗೆ ಎಲ್ಲವನ್ನು ಕೇಳುವವರು ಬೇಕಾಗಿದ್ದಾರೆ, ಸುಮ್ಮನೆ ಕಿವಿಯಾನಿಸಿದರೆ ಸಾಕು, ಇನ್ನಷ್ಟು ವಿಷಯಗಳನ್ನ ಸುರಿಯುವವರು ಬೇಡ, ಎಲ್ಲವನ್ನ ಪ್ರೀತಿಯಿಂದ ಕೇಳಿ, ಒಪ್ಪಿಕೊಳ್ಳುವವರು ಬೇಕಾಗಿದ್ದಾರೆ ಅಷ್ಟೆ. ಅದಕ್ಕೆ ಹುಡುಕಾಟ ಶುರುವಾಗಿದೆ, ಊರು ದಾಟಿ ಪಟ್ಟಣ, ನಗರ ದೇಶಗಳನ್ನ ದಾಟಿದರೂ ಕೇಳುವವರು ಸಿಗುತ್ತಿಲ್ಲ ಅದಕ್ಕೆ ನೋವೆನಿಸಿ ಜಾಹಿರಾತು ನೀಡಿದ್ದಾರೆ... ಕೇಳುವವರು ಬೇಕಾಗಿದ್ದಾರೆ. - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ