ಸ್ಟೇಟಸ್ ಕತೆಗಳು (ಭಾಗ ೧೬೦೪) - ಮಾಯ
ಬರಹಗಾರರ ಬಳಗ
ಫೆಬ್ರವರಿ ೨೭, ೨೦೨೬
೮ ವೀಕ್ಷಣೆಗಳು
ಸಮುದ್ರದ ಮರಳಾಗಬೇಕು ಹೀಗಂದುಕೊಂಡಿದ್ದಾನೆ. ಅವನು ನಡೆದ ಹೆಜ್ಜೆಗಳನ್ನ ಕ್ಷಣದಲ್ಲಿದ್ದು ಬಂದ ಅಲೆಗಳು ಅಳಿಸಿ ಏನೂ ಆಗೇ ಇಲ್ಲವೆಂಬಂತೆ ಹೊರಟು ಹೋದದ್ದನ್ನು ಕಂಡವನಿಗೆ ಆ ಮರಳಂತಾಗಬೇಕು ಅಂತ ಅನಿಸಿತು. ಜೀವನದ ಪಯಣದಲ್ಲಿ ಅವನ ಕನಸುಗಳನ್ನ ತುಳಿದು ಹೋದವರೆಷ್ಟೋ, ಜೊತೆಗೆ ನಿಲ್ಲುತ್ತೇನೆ ಎಂದು ಕೈ ಬಿಟ್ಟವರೆಷ್ಟೋ ಬೇರೆಯವರನ್ನು ನಂಬಿದ್ದಕ್ಕೆ ಕಲಿತ ಪಾಠಗಳನ್ನು ನೆನಪಿಸಿಕೊಂಡು ಮುಂದೆ ಹೆಜ್ಜೆ ಇಡುವ ದೃಢ ವಿಶ್ವಾಸದಲ್ಲಿದ್ದಾನೆ. ಆದರೆ ನೆನಪಿನ ಬುತ್ತಿಯೊಳಗೆ ಆಗಾಗ ಇಣುಕಿ ನೋಡುವ ಚಟವಾಗಿದೆ. ತಪ್ಪುಗಳನ್ನು ನೆನಪಿಸಿ ಕೊರಗುವಂತೆ ಮಾಡುತ್ತಿದೆ. ಆತನಿಗೆ ಎಲ್ಲ ನೆನಪುಗಳು ಸಮುದ್ರ ತೀರದ ಮರಳಿನ ಮೇಲಿನ ಹೆಜ್ಜೆಗಳಂತೆ ಅಳಿಸಿ ಹೋಗಿಬಿಡಬೇಕು ಎಂಬ ಆಸೆಯಾಗಿದೆ. ಆದರೆ ಭಗವಂತ ನಕ್ಕು ನುಡಿಯುತ್ತಾನೆ ಎಲ್ಲವನ್ನು ಮರೆತುಬಿಟ್ಟರೆ ನಾನು ನಿನ್ನವನಾಗುವುದಿಲ್ಲ ಮಗು....
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಫೆಬ್ರವರಿ ೨೭, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬