ಸ್ಟೇಟಸ್ ಕತೆಗಳು (ಭಾಗ ೧೬೧೨) - ನಿರ್ಲಕ್ಷ್ಯ
ಬರಹಗಾರರ ಬಳಗ
ಮಾರ್ಚ್ ೦೭, ೨೦೨೬
೫ ವೀಕ್ಷಣೆಗಳು
ತುಂಬಾ ಪ್ರೀತಿಯಿಂದ ಆಸೆಯಿಂದ ಖರೀದಿಸಿ ತಂದ ಗಿಡವೊಂದಕ್ಕೆ ಪ್ರತಿದಿನ ಬೆಳಗ್ಗೆ ಸಂಜೆ ನೀರು ಹಾಕುತ್ತಿದ್ದೇನೆ, ವಾರಗಳು ಉರುಳಿದವು ಗಿಡವು ತುಂಬಾ ಚೆನ್ನಾಗಿ ಬೆಳೆದು ನಿಂತಿತು. ಹೂವುಗಳು ಮಿನುಗುವುದ್ದಕ್ಕೆ ಆರಂಭವಾಯಿತು. ಮನಸ್ಸಿಗೆ ನೆಮ್ಮದಿ ಆದರೆ ದಿನಗಳು ದಾಟುತ್ತಿವೆ. ಈಗ ನಾನು ಗಿಡದ ಬಳಿಗೆ ಹೋಗುವುದನ್ನೇ ಬಿಟ್ಟಿದ್ದೇನೆ ನಾಳೆ ಅಂತ ದಿನದೂಡುತ್ತಿದ್ದೇನೆ. ಗಿಡ ಸಾಯುವ ಸ್ಥಿತಿಗೆ ತಲುಪಿಬಿಟ್ಟದೆ. ಗಿಡ ನೋವಿನಿಂದ ಅಳುತ್ತಿದೆ ನಿನಗೆ ನೀರು ಉಣಿಸುವುದಕ್ಕೆ ಸಾಧ್ಯವಾಗದಿದ್ದರೆ ಮತ್ತೆ ತಂದು ನನ್ನನ್ನ ಇಷ್ಟು ಎತ್ತರಕ್ಕೆ ಬೆಳೆಸಿದ್ಯಾಕೆ? ಈ ಕ್ಷಣದಲ್ಲಿ ನೀರಿಗಾಗಿ ಪರಿತಪಿಸಿ ಸಾಯುವ ಸ್ಥಿತಿಗೆ ಯಾಕೆ ತಲುಪಿಸಿದ್ದೀಯಾ? ನನ್ನಲ್ಲಿ ಉತ್ತರವಿರಲಿಲ್ಲ. ಪಕ್ಕದ ಮನೆಯಲ್ಲಿ ದಿನವೂ ಮಾತನಾಡುತ್ತಿದ್ದ ಗೆಳೆಯನನ್ನ ಇತ್ತೀಚಿಗೆ ನಿರ್ಲಕ್ಷಿಸಿದ್ದು ನೆನಪಿಗೆ ಬಂತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಮಾರ್ಚ್ ೦೭, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬