ಸ್ಟೇಟಸ್ ಕತೆಗಳು (ಭಾಗ ೧೬೧೫) - ಬಟ್ಟೆ
ಬರಹಗಾರರ ಬಳಗ
ಮಾರ್ಚ್ ೧೦, ೨೦೨೬
೬ ವೀಕ್ಷಣೆಗಳು
ಅವಳು ಬಟ್ಟೆ ಅಂಗಡಿಗೆ ಹೋದಾಗ ಎಲ್ಲ ಬಟ್ಟೆಗಳನ್ನು ಕಣ್ಣುಹಾಯಿಸಿ, ತನ್ನ ಪರ್ಸಲ್ಲಿ ದುಡ್ಡಿದ್ದರೂ ಕೂಡ ಕಡಿಮೆ ಹಣದ ಚಂದದ ಬಟ್ಟೆಗಳನ್ನು ಖರೀದಿಸುತ್ತಾಳೆ. ಅವಳಿಗೆ ಬಟ್ಟೆಯ ಮೇಲೆ ವಿಪರೀತ ಮೋಹ, ವಿಧವಿಧದ ಬಟ್ಟೆಗಳನ್ನ ಧರಿಸಬೇಕೆನ್ನುವ ಆಸೆ. ಹಾಗೇ ಪಕ್ಕದಲ್ಲಿ ಕುಳಿತು ಕಾರಣವೇನು ಎಂದು ವಿಚಾರಿಸಿದರೆ ಶಿಕ್ಷಣ ಮುಗಿಸಿ ಕೆಲಸಕ್ಕೆ ತಲುಪುವವರೆಗೂ ಸ್ವಂತ ದುಡ್ಡಿನಿಂದ ಇಷ್ಟದ ಬಟ್ಟೆಯನ್ನ ಖರೀದಿಸುವುದಕ್ಕೆ ಸಾಧ್ಯವಾಗಿರಲಿಲ್ಲ ಯಾರ್ಯಾರು ಉಟ್ಟು ಅವರಿಗೆ ಬೇಡವೆನಿಸಿದ್ದು ಇವಳಿಗೆ ಬೇಕಾಗಿತ್ತು, ಆ ಎಲ್ಲಾ ಬಟ್ಟೆಗಳಲ್ಲಿ ತನ್ನ ಬದುಕಿನ ಕನಸು ಕಂಡವಳು. ಈಗ ತನ್ನದೇ ಸ್ವಂತ ದುಡಿಮೆಯಿಂದ ಬಟ್ಟೆಗಳನ್ನು ಖರೀದಿಸಿ ಧರಿಸುವಾಗ ಅವಳ ಕಣ್ಣಂಚಲಿ ಪುಟ್ಟ ಕಣ್ಣೀರು ಜಿನುಗುತ್ತದೆ. ಯಾರಾದರೂ ಬಟ್ಟೆಗೋಸ್ಕರ ಪರದಾಡೋದು ಕಂಡುಬಂದರೆ ಹೊಸತನ್ನು ಖರೀದಿಸಿ ನೀಡುತ್ತಾಳೆ. ಅವಳಿಗೆ ಗೊತ್ತಿದೆ ನನ್ನ ಮೈಮೇಲೆ ಉಟ್ಟ ಬೇರೆಯವರ ಬಟ್ಟೆಯ ನೋವೇನು ಅನ್ನೋದು. ಆದರೂ ಬದುಕಿಗೆ ವಂದಿಸುತ್ತಾಳೆ ಇಷ್ಟು ಅದ್ಭುತವಾದ ಪಾಠವನ್ನು ಕಲಿಸಿದ್ದಕ್ಕೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಮಾರ್ಚ್ ೧೦, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬