ಪ್ರತಿದಿನವೂ ಭಗವಂತನಲ್ಲಿ ಬೇಡುತ್ತಿದ್ದ ಸದಾ ಒಳಿತನ್ನೇ ಮಾಡು ಅಂತ. ಅವನು ಕೈ ಹಿಡಿದ ಕೆಲಸವೆಲ್ಲವೂ ಒಳಿತಿನ ಕಡೆಗೆ ಸಾಗುತ್ತಿತ್ತು. ಆ ದಿನ ತುಂಬಾ ತುರ್ತಾಗಿ ಮನೆಗೆ ತಲುಪಬೇಕಿತ್ತು, ಮುಂದಿನ ಚಲನಚಿತ್ರಕ್ಕೆ ಕಥೆಯ ಆಯ್ಕೆಗಾಗಿ ಅವನ ಮನೆಯಲ್ಲಿ ನಿರ್ದೇಶಕರು ಕಾದು ಕುಳಿತಿದ್ದರು. ದೂರದೂರಿಂದ ಮನೆಗ ಹೊರಟು ಬರುವವನಿದ್ದ. ಹಾಗೆ ಬರುವ ವೇಳೆಯಲ್ಲಿ ಮಾರ್ಗ ಮಧ್ಯದಲ್ಲಿ ಆತನ ಗಾಡಿ ಕೈಕೊಟ್ಟಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಗಾಡಿ ಮತ್ತೆ ಹೊರಡಲೇ ಇಲ್ಲ ಮನೆಗೆ ಬಂದವರು ಕಾದು ಕಾದು ಬೇಸರದಿಂದಲೇ ಹೊರಟುಬಿಟ್ಟರು. ಆತ ಭಗವಂತನನ್ನ ಶಪಿಸಿದ ಬದುಕಲ್ಲೊಂದು ಹೊಸ ವಿಷಯ ಕಾಣುವುದಕ್ಕೆ ಪ್ರಾರಂಭವಾಗುವಾಗ ಅಡೆತಡೆಯನ್ನು ಏಕೆ ತರುತ್ತೀಯಾ? ಅಂತ ಭಗವಂತ ಏನು ಮಾತನಾಡಲಿಲ್ಲ. ಆತನಿಗೆ ಭಗವಂತನ ಮೇಲಿನ ಕೋಪ ಕಡಿಮೆಯಾಗಲು ಇಲ್ಲ. ಆ ದಿನ ಆತನ ಬೈಕು ಹಾಳಾಗದೆ ಇದ್ದರೆ ದಾರಿ ಮಧ್ಯದ ರಸ್ತೆಯಲ್ಲಿ ಆಗಿರುವ ಅಪಘಾತಕ್ಕೆ ಆತನೇ ಬಲಿಯಾಗಬೇಕಿತ್ತು ...ಭಗವಂತ‌ ನಕ್ಕು‌ಬಿಟ್ಟ. - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ