ಈ ಸ್ವತ್ತು ಆಗಾಗ ಎಲ್ಲರಿಗೂ ಬೇಕಾಗುತ್ತದೆ. ಎಲ್ಲರ ಬಳಿಯೂ ಕೇಳಿದಾಗ ಸಿಗುವ ಉತ್ತರ ನನ್ನಲ್ಲಿ ಪುರುಸೊತ್ತಿಲ್ಲಾ ಅಂತ. ಆದರೆ ಇಡೀ ದಿನದ ಬಿಡುವಿನಲ್ಲಿ ಬದುಕಿನ ಕ್ಷಣಗಳಿಗೆ ಉಸಿರಾಟದ ಅಮೂಲ್ಯ ಘಳಿಗೆಗಳಿಗೆ ಪುರುಸೊತ್ತು ಕೊಡಲೇಬೇಕು. ದೇಹ ಮನಸ್ಸು ಮಾತು ನೋಟ ಶಬ್ದ ಎಲ್ಲವೂ ಈ ಪುರುಸೊತ್ತನ್ನ ಬಯಸುತ್ತದೆ. ನೀನು ಅದನ್ನು ನೀಡದೇ ಹೋದರೆ ನಿನ್ನ ಅಂತ್ಯದ ದಿನ ಆದಷ್ಟು ಬೇಗ ಹತ್ತಿರವಾಗಲು ಶುರುವಾಗುತ್ತದೆ. ಹಾಗೆಯೇ ಜೊತೆಗಿರಿಸಿಕೊಂಡು ಬಿಡು ಇಲ್ಲವಾದರೆ ಬದುಕು ಜರೂರತ್ತಾಗಿ ಮುಗಿದುಬಿಡುತ್ತದೆ. ದಿನದಲ್ಲಿ ಕ್ಷಣವಾದರೂ ಪುರುಸೊತ್ತು ಸಿಕ್ಕರೆ ಇನ್ನೊಂದಷ್ಟು ಹೆಚ್ಚು ಆಯಸ್ಸನ್ನು ತುಂಬಿಸಿಕೊಂಡು ಮುಂದೆ ದಾಟಬಹುದು. ಹೀಗೆ ಇವತ್ತು ಪುರುಸೊತ್ತಿನ  ಅನುಯಾಯಿಗಳು ನನ್ನ ಮುಂದೆ ಬಂದು ಮಾರ್ಕೆಟಿಂಗ್ ಕೆಲಸ ಶುರು ಮಾಡಿಕೊಂಡಿದ್ದರು. ಅವನನ್ನ ಬಳಸುವ ಕುರಿತು. ಅವರ ಮಾತನ್ನು ಕೇಳುವಾಗ ಹೌದು ನಾನು ಪುರುಸೊತ್ತನ್ನ ಸ್ವಲ್ಪ ಸ್ವಲ್ಪ ಬಳಸಿಕೊಳ್ಳಬೇಕು ಅಂತ ಅನ್ನಿಸಿತು. - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ