ಬದುಕು ಕಷ್ಟವಾಗುತ್ತಿದೆ ,ಹೀಗೆ ಆಸೆಗಳೆಲ್ಲ ಸತ್ತು ಹೋದರೆ ಕೆಲವೊಂದು ಸಲ ದುಡ್ಡಿನ ಅಭಾವ ಕಾಡಿದರೆ ಮುಂದೇನು? ಜೊತೆಗೆ ನಿಲ್ಲುತ್ತೇವೆ ಎಂದವರು ಕೈಕೊಟ್ಟರೆ ಸಾಗುವ ದಾರಿ ಎಲ್ಲಿಗೆ ಬಂದು ನಿಲ್ಲುತ್ತದೆ ? ಈ ಪ್ರಶ್ನೆಯನ್ನು ಅಪ್ಪನ ಮುಂದೆ ಕೇಳಿಬಿಟ್ಟ ನಾಗೇಶ. ಅಪ್ಪ ಅವನ ಪಕ್ಕದಲ್ಲಿ ಕುಳಿತು ಜೀವನದ ಕಥೆ ಹೇಳಿದರು. ಆಸ್ಪತ್ರೆಗೆ ಸೇರಲೇಬೇಕಾಗಿತ್ತು ಸಾವು ಬದುಕಿನ ಹೋರಾಟ ಖಾಸಗಿ ಆಸ್ಪತ್ರೆ ಕೈಗೆಟುಕದ ಕಾರಣ ಸರಕಾರಿ ಆಸ್ಪತ್ರೆ ಬದುಕಾಯ್ತು. ಅಲ್ಲಿ ನಾನೊಬ್ಬನೇ ಉಳಿಯಬೇಕಾಗಿದ್ದ ಕಾರಣ ನಿಮ್ಮಮ್ಮ ಪ್ರತಿದಿನ ರಸ್ತೆ ಬದಿಯಲ್ಲಿ ಮಲಗುತ್ತಿದ್ದರು .ಮಧ್ಯಾಹ್ನ ಒಂದು ಹೊತ್ತಿನ ಊಟಕ್ಕೆ  ದೇವಾಲಯದ ಮುಂದೆ ಸರತಿ ಸಾಲು ನಿಲ್ಲುತ್ತಿದ್ದರು.  ಒಂದು ವರ್ಷಗಳ ಕಾಲ ಆಸ್ಪತ್ರೆ ಹೋರಾಟದಲ್ಲಿ ನನ್ನನ್ನು ಬದುಕಿಸಿಕೊಂಡವಳು ನಿನ್ನಮ್ಮ. ಅವಳ ಆ ಕಷ್ಟದ ಮುಂದೆ ನಿನ್ನ ಕಷ್ಟ ಎಷ್ಟು ದೊಡ್ಡದು ಅಂತ ಯೋಚನೆ ಮಾಡು. ಈಗ್ಲೂ ನಿನ್ನ ಕಷ್ಟ ದೊಡ್ಡದು ಅಂತ ಅನಿಸಿದರೆ ಬದುಕನ್ನ ತ್ಯಜಿಸಿ ಹೊರಟು ಬಿಡು. ಮಗ ಮತ್ತೆ ಬದುಕು ಕಟ್ಟಿಕೊಳ್ಳುವ ನಿರ್ಧಾರ ಮಾಡಿದ. - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ