ವಿಶ್ವ ಗುಬ್ಬಚ್ಚಿ ಸಂರಕ್ಷಣಾ ದಿನ
ಬರಹಗಾರರ ಬಳಗ
ಮಾರ್ಚ್ ೧೯, ೨೦೨೬
೬ ವೀಕ್ಷಣೆಗಳು
ನಾವು ದಡದಿಂದ ಸಾಗರಕ್ಕೆ ಹೋಗುವಾಗ ಎರಡು ಗುಬ್ಬಚ್ಚಿಗಳು ಬೋಟಲ್ಲಿ ಬಂದಿತ್ತು. ಎರಡೂ ಆಟ ಆಡುತ್ತ ಕ್ರಿಮಿ, ಕೀಟಗಳನ್ನು ತಿನ್ನುತ್ತಾ ಮೇಲೆ, ಕೆಳಗೆ ಹಾರುತ್ತಿತ್ತು. ಈ ಸಾಗರದಲ್ಲಿ ಮರ ಗಿಡಗಳು ಇಲ್ಲಾ ಇದರ ಬದುಕು ಹೇಗೆ..? ನಮಗೂ ಒಂದು ಕುತೂಹಲ ಶುರುವಾಗಿತ್ತು, ನಾವು ಕೆಲವೊಂದು ಸಲ ಅಕ್ಕಿ, ಕಾಳು ಹಾಕ್ತ ಇದ್ದದ್ದು ಉಂಟು. ಗುಬ್ಬಚ್ಚಿ ತಿನ್ನುವುದು, ಚಿಂವ್ ಅಂತ ಹಾರುವುದು ನೋಡಲು ಅಷ್ಟೇ ಸುಂದರವಾಗಿತ್ತು.
ಐದಾರು ದಿನ ಕಳೆದು ಹೋಗಿತ್ತು, ಒಂದಿನ ಬಿರುಗಾಳಿ ಜೋರಾಗಿ ಬೀಸಲು ಶುರು ಮಾಡಿತ್ತು. ನಾವು ದಡ ಕಡೆ ಬೋಟನ್ನು ಓಡಿಸಿಕೊಂಡು ಹೋಗುತಿದ್ದೆವು. ರಾತ್ರಿ ಕಳೆದು ಬೆಳಿಗ್ಗೆ ನೋಡಿದಾಗ ಗುಬ್ಬಚ್ಚಿ ನಮಗೆ ಕಾಣೋಕೆ ಸಿಗಲಿಲ್ಲ. ಎಲ್ಲಾ ಕಡೆ ಹುಡುಕಿದೆವು ಎರಡು ಗುಬ್ಬಿಗಳೂ ಕಾಣಲಿಲ್ಲ. ನಾವು ಅಂದುಕೊಂಡೆವು ಬಿರುಗಾಳಿಗೆ ಸಿಕ್ಕಿ ಹಾರಿ ಹೋಗಿರಬೇಕೆಂದು. ಒಂದು ದಿನ ಕಳೆದು ಎರಡನೇ ದಿನಕ್ಕೆ ಒಂದು ಸಂದಿಯಿಂದ ಒಂದು ಗುಬ್ಬಚ್ಚಿ ಹೊರಗಡೆ ಬಂತು, ಕ್ರಿಮಿ, ಕೀಟಗಳು ಗಾಳಿಗೆ ಹಾರಿ ಹೋದರಿಂದ, ಎಲ್ಲಾ ಕಡೆ ಹಾರುತ್ತ ಕ್ಯಾಬಿನ್ ಒಳಗಡೆ ಬಂದು ಕುಳಿತಿತ್ತು.
ಹಿಂದೆ ನಮ್ಮ ಹುಲ್ಲಿನ ಮನೆಯಲ್ಲಿ ಗುಬ್ಬಿಗಳಿಗೆ ಅದೇ ಗೂಡು. ಅಲ್ಲಿ ಸ್ವಚ್ಚಂದವಾಗಿ ಆಟವಾಡುತ್ತ ಜೀವಿಸುತಿದ್ದವು. ಮರದಲ್ಲಿ ಗೂಡು ಕಟ್ಟುವುದು ಎಷ್ಟೊಂದು ಸುಂದರ ಮತ್ತು ಗುಬ್ಬಿಗಳು ಪ್ರಕೃತಿಯಲ್ಲಿನ ಇಂಜೀನಿಯರ್. ಇಂದು ಮನುಷ್ಯನ ಆಧುನಿಕತೆಯಿಂದ, ಗುಬ್ಬಿಗಳು ನಾಡು, ಹಳ್ಳಿಯಿಂದ ಮಾಯವಾಗಿದೆ.ಈ ಪ್ರಕೃತಿಯಲಿ ಬದುಕಲು ಅದಕ್ಕೂ ಹಕ್ಕಿದೆ. ಓ ಗುಬ್ಬಚ್ಚಿಯೇ ನೀನೆಲ್ಲಿ ಹೋದೆ?
-’ಕಡಲಕವಿ’ ಶಿವಾನಂದ ಬಿ ಮೊಗೇರ, ಭಟ್ಕಳ.
ಪ್ರಕಟಿಸಿದ: ಮಾರ್ಚ್ ೧೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬