ಕನ್ನಡ ಪತ್ರಿಕಾ ಲೋಕ (ಭಾಗ ೨೫೩) - ಕಣಿಪುರ
ಶ್ರೀರಾಮ ದಿವಾಣ
ಮಾರ್ಚ್ ೩೦, ೨೦೨೬
೧೬ ವೀಕ್ಷಣೆಗಳು
ಎಂ. ನಾ. ಚಂಬಲ್ತಿಮಾರ್ ಅವರ "ಕಣಿಪುರ"
ಗಡಿನಾಡು ಕಾಸರಗೋಡಿನ ಪತ್ರಕರ್ತ, ಲೇಖಕ ಎಂ. ನಾ. ಚಂಬಲ್ತಿಮಾರ್ ಅವರು ಹೊರತರುತ್ತಿರುವ ಯಕ್ಷಗಾನಕ್ಕೆ ಮೀಸಲಾದ ಸಾಂಸ್ಕೃತಿಕ ಮಾಸಪತ್ರಿಕೆಯಾಗಿದೆ "ಕಣಿಪುರ". ೨೦೧೦ರಲ್ಲಿ, "ತೆಂಕಣ ಯಕ್ಷಗಾನದ ತವರು ಪಾರ್ತಿಸುಬ್ಬನ ನೆಲದಿಂದ ಪ್ರಕಟಗೊಳ್ಳುವ ವಿಭಿನ್ನ ಯಕ್ಷ ಪತ್ರಿಕೆ" ಎಂಬ ಘೋಷಣೆಯೊಂದಿಗೆ ಆರಂಭವಾದ ಕಣಿಪುರ, ಖಾಸಗಿ ಪ್ರಸಾರಕ್ಕೆ ಮಾತ್ರ ಮೀಸಲಾಗಿದೆ.
ಕುಂಬಳೆ ಕಂಚಿಕಟ್ಟೆ ರಸ್ತೆಯ ನಾಯಕ್ಸ್ ಜಂಕ್ಷನ್ ನಲ್ಲಿ ಕಾರ್ಯಾಲಯ ಹೊಂದಿರುವ "ಕಣಿಪುರ"ದ ಪುಟ ವಿನ್ಯಾಸಕರಾಗಿದ್ದವರು ವಿಜಯ್ ಕಾಸರಗೋಡು. ಕುಂಬಳೆಯ ಕೀರ್ತನಾ ಕ್ರಿಯೇಷನ್ಸ್ ನಲ್ಲಿ ಅಕ್ಷರ ಜೋಡಣೆಯ ಕೆಲಸ ನಡೆಯುತ್ತಿತ್ತು.
ಪತ್ರಿಕೆಯ ವಾರ್ಷಿಕ ಚಂದಾ ಮೊತ್ತ ೩೦೦ ರೂಪಾಯಿ. ಎರಡು ವರ್ಷಕ್ಕೆ ೬೦೦ ರೂ., ನಾಲ್ಕು ವರ್ಷಕ್ಕೆ ೧,೨೦೦ ರೂ., ಪ್ರೋತ್ಸಾಹಕರು ೨೦೦೦ ರೂ. ಮತ್ತು ೫೦೦೦ ರೂ. ಹಾಗೂ ಮಹಾಪೋಷಕತ್ವ ಮೊತ್ತ ೧೦ ಸಾವಿರ ರೂಪಾಯಿಗಳಾಗಿತ್ತು.
ಯಕ್ಷಗಾನ ಸಂಬಂಧಿ ಲೇಖನ, ವಿಮರ್ಶೆ, ವಿಶ್ಲೇಷಣೆ, ಹಿಮ್ಮೇಳ, ಮುಮ್ಮೇಳ ಕಲಾವಿದರ ಪರಿಚಯ, ಸಾಧನೆಯ ಕುರಿತಾದ ಬರೆಹಗಳು, ಸಂದರ್ಶನಗಳು, ಯಕ್ಷಗಾನ ಸಂಬಂಧಿ ಕಾರ್ಯಕ್ರಮಗಳ ಚಿತ್ರ - ವರದಿಗಳು "ಕಣಿಪುರ" ದಲ್ಲಿ ಪ್ರಕಟವಾಗುತ್ತಿತ್ತು.
~ ಶ್ರೀರಾಮ ದಿವಾಣ
ಪ್ರಕಟಿಸಿದ: ಮಾರ್ಚ್ ೩೦, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬