ಅವನ ಬದುಕು ಬದಲಾಗ್ತಾ ಇಲ್ಲ.ಸಂಪಾದನೆ ಬಂದಾಗಲೇ ಖರ್ಚು ಬಾಗಿಲಲ್ಲಿ ಕಾಯುತ್ತಿರುತ್ತೆ.ಮಾಸ ಮುಗಿಯುವಷ್ಟರಲ್ಲಿ ಹಣವೂ ಮುಗಿದು, ಆಸೆಯೂ ಒಣಗುತ್ತಿತ್ತು. ಕಾಯುವಿಕೆಯಲ್ಲಿ ದಿನಗಳು ಓಡುತ್ತಿದ್ದವು. ಕನಸುಗಳು ಇನ್ನೂ ಮನೆಯ ಬಾಗಿಲನ್ನೇ ದಾಟಿರಲಿಲ್ಲ.ಸುತ್ತಲಿನ ಜಿಪುಣರ ಬದುಕು ನೋಡಿದರೆ ಬೆಳಕು ಕಾಣುತ್ತಿತ್ತು, ಆದ್ರೆ ಅವನ ಬದುಕು ಮಾತ್ರ ಕತ್ತಲಲ್ಲೇ ನಿಂತಿತ್ತು.ಒಂದು ದಿನ "ನನ್ನ ಬದುಕಿಗೆ ಬೆಳಕು ಬೇಕಾದರೆ, ನಾನು ಬೆಳಕು ಉಳಿಸ ಬೇಕಲ್ಲವಾ?”ಆ ದಿನದಿಂದ ಅವನು ಬದಲಾಗ್ತಾನೆ... ಹಣ ಕಡಿಮೆ ಇದ್ದರೂ, ಅಭ್ಯಾಸ ಹೆಚ್ಚಿಸಿಕೊಳ್ಳಾನೆ. ಸಮಯ ವ್ಯರ್ಥ ಮಾಡೋದು ಬಿಡ್ತಾನೆ. ಕನಸುಗಳನ್ನು ಮನೆಯಿಂದ ಹೊರಗೆ ಕರೆದೊಯ್ಯಲು ಪ್ರಯತ್ನ ಮಾಡ್ತಾನೆ.ಸ್ವಲ್ಪ ದಿನಗಳ ನಂತರ,ಬದುಕು ಒಂದೇ ಸಲ ಬದಲಾಗ್ಲಿಲ್ಲ...ಆದ್ರೆ ಕತ್ತಲಲ್ಲಿ ಒಂದು ಚಿಕ್ಕ ದೀಪ ಬೆಳಗಿತ್ತು. ಅದೇ ದೀಪ, ಅವನ ಬದುಕನ್ನ ಚಿಕ್ಕದಾದರೂ ಉಳಿಸಲು ಶುರು ಮಾಡ್ತಾನೆ. ನಿಧಾನವಾಗಿ ಬೆಳಕಾಗಿಸ್ತು. - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ