ಬೆನ್ನಿನ ಮೇಲೆ ಹೊತ್ತ ಭಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಕಾಲುಗಳು ನಡುಗುತ್ತಿವೆ… ಉಸಿರಾಟ ಏರುಪೇರಾಗುತ್ತಿದೆ… ಆದರೂ ಅವನು ನಿಲ್ಲಲಿಲ್ಲ. ಹೆಚ್ಚು ಭಾರ ಹೊತ್ತಷ್ಟು ಸಂಪಾದನೆ‌ ಹೆಚ್ಚು.ಇಲ್ಲ… ಇನ್ನೂ ಸ್ವಲ್ಪ ದೂರ ನಡೆಯಬೇಕು,” ಎಂದು ತನ್ನ ಮನಸ್ಸಿಗೆ ಹೇಳಿಕೊಂಡ.ಅವನ ಬೆನ್ನಿನ ಮೇಲೆ ಇದ್ದದ್ದು ಕೇವಲ ಹೊರೆ ಅಲ್ಲ. ಅದರೊಳಗೆ ಮನೆಯವರ ಬದುಕು ಇತ್ತು. ತಾಯಿಯ ಆಸೆ, ಹೆಂಡತಿಯ ನಂಬಿಕೆ,ಮಗಳ ಮುದ್ದು ನಗು… ಎಲ್ಲವೂ ಅದರಲ್ಲಿ ಸೇರಿಕೊಂಡಿದ್ದವು.ಪ್ರತಿ ಹೆಜ್ಜೆಯೂ ನೋವಿನಿಂದ ತುಂಬಿತ್ತು.ಆದರೂ ಪ್ರತಿಯೊಂದು ಹೆಜ್ಜೆಯಲ್ಲೂ ಒಂದು ಪ್ರೀತಿ ಇತ್ತು.ಅವನಿಗೆ ಗೊತ್ತು ತಾನು ಹೊತ್ತಿರುವ ಭಾರವನ್ನ ಸರಿಯಾದ ಸ್ಥಳದಲ್ಲಿ ಇಳಿಸಿದರೆ ಮಾತ್ರ, ಮನೆಯವರು ನೆಮ್ಮದಿಯಿಂದ ಉಸಿರಾಡುತ್ತಾರೆ ಎಂದು. ಅವನು ದುರ್ಬಲನಾಗಿರಬಹುದು. ಆದರೆ ಅವನ ಹೊಣೆಗಾರಿಕೆ ಬಲವಾಗಿತ್ತು. ಕೊನೆಗೆ ಅವನು ನಿಂತು, ಆಕಾಶದ ಕಡೆ ನೋಡಿದ.ಒಂದು ನಗು ಮೂಡಿತು.ಈ ಭಾರವೇ ನನ್ನ ಶಕ್ತಿ…” ಎಂದು ಹೇಳಿ ಮತ್ತೆ ಮುಂದೆ ನಡೆಯಲು ಆರಂಭಿಸಿದ. ಹೆಜ್ಜೆ ದೃಢವಾಯಿತು - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ