ಸ್ಟೇಟಸ್ ಕತೆಗಳು (ಭಾಗ ೧೬೪೬) - ಅವಳು
ಬರಹಗಾರರ ಬಳಗ
ಏಪ್ರಿಲ್ ೧೦, ೨೦೨೬
೮ ವೀಕ್ಷಣೆಗಳು
ಅವಳು ಮನೆಯ ಮುದ್ದು ಮಗಳು. ಎಂದಿಗೂ ಕಷ್ಟದ ಕೆಲಸಕ್ಕೆ ಕೈ ಹಾಕಿಸದೇ ನಾಲ್ಕು ಗೋಡೆಗಳ ನಡುವೆ ಬೆಳೆಸಿದರು. ಅವಳ ದಿನಗಳು ಅವಳದೇ ಇಷ್ಟವಾದಾಗ ನಿದ್ರೆ, ಇಷ್ಟವಾದಾಗ ನಗು,ಯಾರಿಗೂ ಹೇಳಬೇಕಾದ ಜವಾಬ್ದಾರಿಯಿಲ್ಲ. ಆದ್ರೆ ಮದುವೆಯಾದ ಮೇಲೆ, ಅವಳಿಗೆ ಹೊಸ ಲೋಕದ ಪರಿಚಯ ಆಯ್ತು. ಅಲ್ಲಿ ಬೆಳಿಗ್ಗೆ ಕಣ್ಣು ತೆರೆಯುವಷ್ಟರಲ್ಲಿ ಜವಾಬ್ದಾರಿಗಳು ಕಾಯುತ್ತಿದ್ದವು. "ಇದನ್ನು ಮಾಡು... ಅದನ್ನು ಮುಗಿಸು..."ಅಡುಗೆ, ಮನೆ, ಜನರ ನಿರೀಕ್ಷೆಗಳು, ಒಂದೊಂದು ಕೆಲಸ ಅವಳಿಗೆ ಪರ್ವತದಂತೆ ಕಾಣಿಸಿತು. "ನನಗೆ ಇದು ಬರುವುದಿಲ್ಲ...""ನಾನು ಯಾಕೆ ಇಷ್ಟು ಬಲಹೀನ?" ಅವಳು ನಿಧಾನವಾಗಿ ಮೌನವಾಗಲು ಶುರುಮಾಡಿದಳು. ನಗು ಮರೆತು ಹೋಯಿತು. ಮನಸ್ಸಿನಲ್ಲಿ ಒಂದು ಪ್ರಶ್ನೆ ಮಾತ್ರ, "ನನ್ನನ್ನು ಯಾರೂ ಅರ್ಥ ಮಾಡ್ಕೊಳ್ತಿಲ್ಲ..."ದಿನಗಳು ಕಳೆದವು... ಅವಳು ಎಲ್ಲವನ್ನೂ ಬಿಟ್ಟುಬಿಡಲು ಶುರುಮಾಡಿದಳು. ಅವನು ನಗಲಿಲ್ಲ... ಬೈಯಲಿಲ್ಲ, ಅವಳ ಪಕ್ಕದಲ್ಲಿ ಕುಳಿತು ಹೇಳಿದ: “ಬದುಕನ್ನ ನಿಧಾನವಾಗಿ ಅರ್ಥೈಸಿಕೊಳ್ಳಬೇಕು. ಅವಳು ಮತ್ತೆ ಪ್ರಾರಂಭಿಸಿದಳು. ಅಡುಗೆ ಕಲಿತಳು. ಜವಾಬ್ದಾರಿಯನ್ನು ಸ್ವೀಕರಿಸಿದಳು. ತಪ್ಪು ಮಾಡ್ತಾ, ಸರಿಪಡಿಸಿಕೊಳ್ಳುತ್ತಾ ಮುಂದೆ ನಡೆದುಬಿಟ್ಟಳು. ಅವಳಿಗೆ ಆಗ ಅರ್ಥ ಆಯ್ತು ಸಮಸ್ಯೆ ಬದುಕಿನಲ್ಲಿ ಅಲ್ಲ ಸಿದ್ಧತೆಯಲ್ಲಿ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಏಪ್ರಿಲ್ ೧೦, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬