ಸ್ಟೇಟಸ್ ಕತೆಗಳು (ಭಾಗ ೧೬೫೦) - ಕಾರ್ಯಕರ್ತ
ಬರಹಗಾರರ ಬಳಗ
ಏಪ್ರಿಲ್ ೧೪, ೨೦೨೬
೫ ವೀಕ್ಷಣೆಗಳು
ಹಪಹಪಿಕೆ ನಿಲ್ಲುತ್ತಿಲ್ಲ, ಒಪ್ಪಿಗೆಗೆ ಸಹಿಹಾಕುವಾಗ ಕೈ ನಡುಗುತ್ತಿದೆ. ಮಾತು ತೊದಲುತ್ತಿದೆ, ಸ್ವಂತವಾಗಿ ನಿಲ್ಲಲು, ಓಡಾಡಲು, ಸ್ವಂತ ಕೆಲಸ ಮಾಡಿಕೊಳ್ಳಲು ಸಾದ್ಯವಿಲ್ಲದ ಸ್ಥಿತಿ, ಆದರೂ ಅಧಿಕಾರ ಬೇಕು. ತನಗೆ, ತನ್ನ ಮಗನಿಗೆ, ಸೊಸೆಗೆ, ಹೆಂಡತಿಗೆ ಕುಟುಂಬಿಕರಿಗೆ ಹೀಗೆ ದಾಹದ ಪಟ್ಟಿ ಮುಗಿಯುತ್ತಿಲ್ಲ, ಅವನನ್ನ ಆರಿಸಲು ಸಾವಿರಾರು ಜನರ ಹಗಲು ರಾತ್ರಿಯ ಪರಿಶ್ರಮವಿದೆ. ಅವರ್ಯಾರಿಗೂ ಒಂದು ದಿನವೂ ಅಧಿಕಾರದ ಯೋಚನೆಯ ಅವಕಾಶವೂ ಇಲ್ಲ, ಅಲ್ಲಿ ಮೆರವಣಿಗೆಗೆ ತಯಾರಿ ನಡೆಸುವವನು, ಪತಾಕೆ ಕಟ್ಟುವವನು ಅವಕಾಶಕ್ಕೆ ಕಾಯುತ್ತಿದ್ದಾನೆ, ಕೆಲಸಗಳಿಗೆ ನಿವೃತ್ತಿ ಇದ್ದ ಹಾಗೆ ಅಧಿಕಾರಕ್ಕೂ ಇರಲಿ, ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅಧಿಕಾರ ಸಿಗಲಿ ಹೀಗೆಂದು ಬೇಡಿಕೆ ಸಲ್ಲಿಸಿದ್ದಾನೆ ಕಾರ್ಯಕರ್ತ. ಕೇಳುತ್ತಿಲ್ಲ ಯಾರಿಗೂ…
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಏಪ್ರಿಲ್ ೧೪, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬