ಪುಟ್ಟ ಗಿಡವೊಂದನ್ನ ಮನೆಯ ಮುಂದೆ ಹೂವಿನ ಕುಂಡದಲ್ಲಿ ನೆಟ್ಟಾಗಿದೆ. ಅದಕ್ಕೆ ಸಂಭ್ರಮವೋ ಸಂಭ್ರಮ. ಪ್ರತಿದಿನ ನೀರು ಗೊಬ್ಬರವನ್ನು ಯಥೇಚ್ಛವಾಗಿ ಪಡೆದು ನಿಧಾನವಾಗಿ ಬೆಳೆದು ನಿಲ್ಲುವುದಕ್ಕೆ ಪ್ರಾರಂಭ ಆಯಿತು. ಬೇರಿಳಿಸಿ ಕಷ್ಟದಿಂದ ಪಡೆದುಕೊಳ್ಳುವ ಸ್ಥಿತಿ ಏನಲ್ಲ. ಹಾಗೆಯೇ ದಿನ ಕಳೆದಂತೆ ಆ ಗಿಡಕ್ಕೆ ನಾನು ಸರಿಯಾಗಿ ಬೆಳೆಯುತ್ತಿಲ್ಲ ಅಂತ ಅನ್ನಿಸೋದಕ್ಕೆ ಆರಂಭವಾಯಿತು. ತನ್ನ ಬೇರುಗಳು ಸರಿಯಾದ ಪೋಷಕಾಂಶವನ್ನು ಪಡೆದುಕೊಳ್ಳುತ್ತಿಲ್ಲ ತನ್ನ ಬೇರುಗಳಿಂದಾಗಿಯೇ ತಾನು ಸಾಯುವ ಸ್ಥಿತಿಗೆ ಬಂದಿದ್ದೇನೆ ಅನ್ನೋದು ಅರ್ಥವಾಗುತ್ತಾ ಹೋಯಿತು. ಕೊನೆಗೊಂದು ದಿನ ಸಂಪೂರ್ಣವಾಗಿ ಗಿಡ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತು. ಕೊನೆಯವರೆಗೂ ಆ ಗಿಡಕ್ಕೆ ತನ್ನದೇ ತಪ್ಪಿನಿಂದ ತಾನು ಸಾಯುತ್ತಿದ್ದೇನೆ ಅನ್ನೋದರ್ಥವಾಯಿತು. ಆದರೆ ತನಗೆ ಪ್ರತಿ ದಿನವೂ ನೀರು ಹಾಕುವ ಯಜಮಾನ ನೀರಿನೊಂದಿಗೆ ವಿಷವನ್ನು ಹಾಕುವ ವಿಷಯ ಕೊನೆಗೂ ಆ ಗಿಡಕ್ಕೆ ಅರ್ಥವಾಗಲೇ ಇಲ್ಲ. ಬೆಳೆಯುವ ಪ್ರತಿ ಗಿಡವು ತನಗೆ ಬೀಳುತ್ತಿರುವುದು ಪೌಷ್ಟಿಕಾಂಶವೋ ವಿಷವೋ ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ… - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ