ಆಹಾರ ಹುಡುಕುವ ಕೆಲಸ ಇರುವೆಗಳಿಗೆ ಶುರುವಾಗಿದೆ. ಹಾಗೆ ತಮ್ಮ ನಾಯಕ ಹೋದ ದಿಕ್ಕಿನಲ್ಲಿ ಉಳಿದ ಒಂದಷ್ಟು ಇರುವೆಗಳು ಹಿಂಬಾಲಿಸಲು ಶುರು ಮಾಡಿದವು. ಹೇಗೂ ತಂಡವನ್ನು ವಿಭಾಗ ಮಾಡಿದ್ದ ಕಾರಣ ಒಬ್ಬೊಬ್ಬರು ಒಂದೊಂದು ದಿಕ್ಕನ್ನು ಹಿಡಿದು ಪಯಣ ಮುಂದುವರಿಸಿದರು. ಅದು ಒಂದು ದೊಡ್ಡ ಮೈದಾನ ಅಲ್ಲಿ ಆಹಾರ ಸಿಗುವ ಯಾವ ಸೂಚನೆಯೂ ಇರಲಿಲ್ಲ ಹಾಗೆ ಇವರ ಪಯಣ ತಿರುಗುತ್ತಾ ತಿರುಗುತ್ತಾ ಆ ಮೈದಾನಕ್ಕೆ ಸುತ್ತು ಬರುವುದಕ್ಕೆ ಪ್ರಾರಂಭವಾದವು ಮುಂದಿನ ಇರುವೆಯನ್ನು ಅನುಸರಿಸಿ ಉಳಿದ ಇರುವೆಗಳು ಕಣ್ಣು ಮುಚ್ಚಿ ಪಯಣಿಸುತ್ತಿದ್ದವು. ಇಡೀ ಮೈದಾನದಲ್ಲಿ ಮುಂದಿನ ಇರುವೆ ಹೋದ ದಾರಿಯನ್ನೇ ಅನುಸರಿಸಿದವೇ ಹೊರತು ತಾವಾಗಿ ಆಹಾರ ಹುಡುಕುವ ಯಾವ ಪ್ರಯತ್ನವನ್ನು ಉಳಿದ ಇರುವೆಗಳು ಮಾಡದ ಕಾರಣ ಬಿಸಿಲಲ್ಲಿ ಸುತ್ತು ಸುತ್ತಿ ಸುತ್ತಿ ಅಲ್ಲೇ ಒಣಗಿ ಸತ್ತು ಹೋದವು. ಅಷ್ಟೂ ಇರುವೆಗಳು ತಮ್ಮ ಜೀವವನ್ನು ಬರಿಯ ಹುಡುಕಾಟದಲ್ಲೇ ಕಳೆದುಕೊಂಡುಬಿಟ್ಟವು ಕೊನೆಯ ಕ್ಷಣದಲ್ಲಿ ಕೊನೆಯಲ್ಲಿದ್ದ ಪುಟ್ಟ ಇರುವೆಯೊಂದು ಹೇಳಿದ ಮಾತಿಷ್ಟೇ ನಮ್ಮ ಹೊಟ್ಟೆಯನ್ನ ತುಂಬಿಸಬೇಕಾದರೆ ಆಹಾರವನ್ನು ನಾವೇ ಹುಡುಕಬೇಕು ಯಾರನ್ನು ಅನುಸರಿಸ ಹೊರಟರೆ ಅವರೊಂದಿಗೆ ನಮ್ಮ ಅಂತ್ಯವೂ ಸಾಧ್ಯವಾಗುತ್ತದೆ - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ