ಯಾರಿಗೂ ತಲುಪದ ಪತ್ರ ಒಂದನ್ನ ಬರೆಯಲು ಆತ ಶುರು ಹಚ್ಚಿಕೊಂಡಿದ್ದಾನೆ. ಆ ಪತ್ರದಲ್ಲಿ ಅವನ ಮನಸ್ಸು ನಿಜವಾಗಿ ಆಲೋಚಿಸಿದ ರೀತಿ, ಕೆಟ್ಟ ಆಲೋಚನೆಗಳು, ಒಳ್ಳೆಯ ಆಲೋಚನೆಗಳು, ಯಾರ್ಯಾರನ್ನ ಕಂಡಾಗ ಮನಸ್ಸಲ್ಲಿ ಏನೇನು ಭಾವನೆಗಳು ಮೂಡುತ್ತಿತ್ತೋ, ಎಲ್ಲವನ್ನು ಪತ್ರದಲ್ಲಿ ಬರೆದುಬಿಟ್ಟಿದ್ದಾನೆ. ಯಾರ್ಯಾರ ತಪ್ಪುಗಳೇನು? ಅವರು ಹೋಗಬೇಕಾದ ದಾರಿ ಯಾವುದು? ಯಾರೆಲ್ಲ ತಪ್ಪು ಕೆಲಸ ಮಾಡ್ತಾ ಇದ್ದಾರೆ ಎಲ್ಲವನ್ನು ಚಾಚೂ ತಪ್ಪದೇ ಬರೆದುಬಿಟ್ಟಿದ್ದಾನೆ. ಆದರೆ ಅವನ ಮನಸ್ಸಲ್ಲಿ ಒಂದು ಚಿಟಿಕೆಯಷ್ಟು ಧೈರ್ಯವಿಲ್ಲದ ಕಾರಣ ವಿಳಾಸವನ್ನು ಹಾಕದೆ ಪತ್ರವನ್ನು ಅಂಚೆಪೆಟ್ಟಿಗೆ ಒಳಗೆ ತುಂಬಿಸಿ ನಿರಳನಾಗಿದ್ದಾನೆ. ಅಂಚೆಪೆಟ್ಟಿಗೆ ಇಂದಿನವರೆಗೂ ಆ ಪತ್ರವನ್ನು ತನ್ನೊಳಗೆ ತುಂಬಿಕೊಂಡು ವಿಳಾಸಕ್ಕಾಗಿ ಕಾಯುತ್ತಿದೆ. ಹಾಗೆಯೇ ವಿಳಾಸ ಇಲ್ಲದಿರುವ ಉಳಿದ ಪತ್ರಗಳ ಜೊತೆ… - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ