ಸ್ಟೇಟಸ್ ಕತೆಗಳು (ಭಾಗ ೧೬೫೭) - ಗುರಿ
ಬರಹಗಾರರ ಬಳಗ
ಏಪ್ರಿಲ್ ೨೧, ೨೦೨೬
೪ ವೀಕ್ಷಣೆಗಳು
ಇಬ್ಬರು ಹೆಜ್ಜೆ ಇಟ್ಟು ತುಂಬಾ ದೂರದವರೆಗೆ ನಡೆದು ಬಂದಿದ್ದಾರೆ. ಇಬ್ಬರಿಗೂ ಮುಂದೆಲ್ಲಿಗೆ ತಲುಪುತ್ತೇವೆ ಅನ್ನುವ ಯೋಚನೆಯಿಲ್ಲ, ದಾರಿಯ ಬಗ್ಗೆ ಅಷ್ಟು ನಿಖರವಾದ ಮಾಹಿತಿ ಇಲ್ಲ. ಹಾಗೆ ಕಾಡಿನಲ್ಲಿ ಬಂದು ನಿಂತವರಿಗೆ ಮುಂದೇನು ಮಾಡಬೇಕು ಅನ್ನುವ ಯೋಜನೆ ಶುರುವಾಯಿತು ಮೊದಲನೆಯವನ ವಾದ ಇಲ್ಲಿಯವರೆಗೆ ತಲುಪುವುದಕ್ಕೆ ನಮಗೆ ದಾರಿ ತೋರಿಸಿದ್ರು ಯಾವ ದಾರಿಯಲ್ಲಿ ಸಾಗಬೇಕು ಅಂತ ಹೇಳಿದರು ಕೂಡ ಹಾಗೆ ಹೇಳಿದವರ ಮಾತನ್ನ ಕೇಳಿಸಿಕೊಂಡು ಅವರು ಕೊಟ್ಟ ದಾರಿಯಲ್ಲಿ ನಾವು ಇಲ್ಲಿಯವರೆಗೆ ತಲುಪಿದ್ದೇವೆ. ಹೀಗಿರುವಾಗ ಮುಂದೆಯೂ ಅವರೇ ದಾರಿ ಹೇಳಿ ಅದೇ ದಾರಿಯಲ್ಲಿ ಮುಂದುವರೆದು ಗುರಿ ತಲುಪುವ. ಆದರೆ ಎರಡನೇಯವನ ವಾದ ಬೇರೆ. ಇಲ್ಲಿಯವರೆಗೆ ಅವರು ದಾರಿ ಹೇಳಿದ್ದು ಆಗಬಹುದು ಆದರೆ ಮುಂದೆಯೂ ಅವರೇ ದಾರಿ ತೋರಿಸಬೇಕು ಅನ್ನೋದು ತಪ್ಪು. ನಮಗೆ ಬೇಕಾದ ಕಾರಣ ನಾವೇ ದಾರಿ ಹುಡುಕಿ ಕೊಳ್ಳಬೇಕು, ನಮಗೆ ಎಲ್ಲಿಗೆ ತಲುಪಬೇಕು ಅನ್ನೋದು ಗೊತ್ತಿದೆ ಅದಕ್ಕಾಗಿ ಬೇಕಾದ ದಾರಿಯನ್ನ ನಾವೇ ಆಯ್ದುಕೊಳ್ಳಬೇಕು ಯಾವ ಬದುಕಿನ ಗುರಿಗೂ ಮ್ಯಾಪ್ ಗಳು ಸಿಗುವುದಿಲ್ಲ ಅರ್ಥ ಮಾಡ್ಕೊ. ಮೊದಲನೇಯವ ಅಲ್ಲಿ ನಿಂತು ಬಿಟ್ಟ ಎರಡನೇಯವ ಮುಂದೆ ಹೆಜ್ಜೆ ಇಟ್ಟ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಏಪ್ರಿಲ್ ೨೧, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬