ಜ್ಞಾನೇಶ್ವರಿ ಜನಸೇವಾ ಟ್ರಸ್ಟ್ ನ "ಜೀವನ ಸಂಧ್ಯಾ ವಾಣಿ" ಶಿವಮೊಗ್ಗ ಗಾಡಿಕೊಪ್ಪದ ಸ್ವಾಮೀ ವಿವೇಕಾನಂದ ಬಡಾವಣೆಯಲ್ಲಿ 'ಜೀವನ ಸಂಜೆ ವೃದ್ಧಾಶ್ರಮ' ನಡೆಸುತ್ತಿರುವ ಜ್ಞಾನೇಶ್ವರಿ ಜನಸೇವಾ ಟ್ರಸ್ಟ್ (ರಿ) ಸಂಸ್ಥೆ ಪ್ರಕಟಿಸುತ್ತಿದ್ದ ಮಾಸಪತ್ರಿಕೆಯಾಗಿದೆ "ಜೀವನ ಸಂಧ್ಯಾ ವಾಣಿ". ೨೦೦೦ನೇ ಇಸವಿಯ ಜನವರಿಯಲ್ಲಿ ಈ ಪತ್ರಿಕೆ ಆರಂಭವಾಗಿದೆ. ಶಿವಮೊಗ್ಗದ ಹಳೆ ಅಂಚೆ ಕಚೇರಿ ರಸ್ತೆಯ ಹೊಸೂಡಿ ಮುದ್ರಣ ಮತ್ತು ಪ್ರಕಾಶನದಲ್ಲಿ ಪತ್ರಿಕೆ ಮುದ್ರಣವಾಗುತ್ತಿತ್ತು. ನಾಗೇಶ್ ರಾಯ್ಕರ್, ಹೆಚ್. ಇಬ್ರಾಹಿಂ, ಎಂ. ಡಿ. ಲಕ್ಷ್ಮಿಕಾಂತ್, ರಾಘವೇಂದ್ರ ಹೊಸೂಡಿ, ಮೋಹನ್ ಪೈ, ಕೆ. ಎನ್. ಮರುಳಾರಾಧ್ಯ, ಡಾ.‌ಶಿವಪ್ಪ, ಎ. ಜಿ. ಈಶ್ವರಪ್ಪ, ಎಸ್. ಎನ್. ಶಿವರಾಮ ಶಾಸ್ತ್ರಿ, ಹೆಚ್. ವಿ. ನಾಯಕ್ ಹಾಗೂ ನಾಗಪ್ಪ ಪಟೇಲ್ ಇವರು ಸಂಪಾದಕೀಯ ಮಂಡಳಿ ಸದಸ್ಯರಾಗಿದ್ದುಕೊಂಡು ಪತ್ರಿಕೆಯನ್ನು ರೂಪಿಸುತ್ತಿದ್ದರು. ಎಂಟು ಪುಟಗಳ "ಜೀವನ ಸಂಧ್ಯಾ ವಾಣಿ"ಯಲ್ಲಿ ಆಶ್ರಮದ ಸುದ್ಧಿಗಳು ಮತ್ತು  ಆಶ್ರಮವಾಸಿಗಳ ಲೇಖನಗಳು ಆದ್ಯತೆಯಲ್ಲಿ ಪ್ರಕಟವಾಗುತ್ತಿತ್ತು. ~ ಶ್ರೀರಾಮ ದಿವಾಣ