ಬೀಟ್ರೂಟ್ ಗೊಜ್ಜು
ಕವಿತ ಮಹೇಶ್
ಆಗಸ್ಟ್ ೨೫, ೨೦೨೪
೧೬ ವೀಕ್ಷಣೆಗಳು
ಬೀಟ್ರೂಟ್ ಹೋಳುಗಳು, ತೆಂಗಿನ ತುರಿ, ಒಣ ಮೆಣಸಿನಕಾಯಿ, ಬಿಳಿ ಎಳ್ಳಿನ ಹುಡಿಗಳನ್ನು ಸೇರಿಸಿ ತರಿತರಿಯಾಗಿ ರುಬ್ಬಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಸಾಸಿವೆ-ಇಂಗು-ಕರಿಬೇವಿನ ಒಗ್ಗರಣೆ ತಯಾರಿಸಿ. ಒಗ್ಗರಣೆಗೆ, ಹುಣಸೆ ರಸ, ಬೆಲ್ಲದ ಹುಡಿ, ಉಪ್ಪು, ಅರೆದ ಮಿಶ್ರಣ ಹಾಕಿ ಚೆನ್ನಾಗಿ ಕುದಿಸಿ, ಒಲೆಯಿಂದ ಕೆಳಗಿಳಿಸಿ. ರುಚಿಯಾದ ಬೀಟ್ರೂಟ್ ಗೊಜ್ಜು ಸವಿಯಲು ಸಿದ್ಧ.
ಪ್ರಕಟಿಸಿದ: ಆಗಸ್ಟ್ ೨೫, ೨೦೨೪
|
ನವೀಕರಿಸಿದ: ಏಪ್ರಿಲ್ ೨೧, ೨೦೨೬