ಹೆಸರುಬೇಳೆಯನ್ನು ಪರಿಮಳ ಬರುವವರೆಗೆ ಹುರಿಯಿರಿ. ಬಳಿಕ ಅಕ್ಕಿ ಮತ್ತು ಹೆಸರುಬೇಳೆಯನ್ನು ಕುಕ್ಕರಿಗೆ ಹಾಕಿ. ಜೊತೆಗೆ ಹಿತಕಿದ ಅವರೆಕಾಳು, ಒಂದು ಕಪ್ ನೀರು, ಒಂದು ಕಪ್ ಹಾಲು ಮತ್ತು ಒಂದು ಚಮಚ ತುಪ್ಪ ಹಾಕಿ ಬೇಯಿಸಿ. ಬಾಣಲೆಗೆ ಬೆಲ್ಲ ಮತ್ತು ಒಂದು ಕಪ್ ನೀರು ಹಾಕಿ ಕರಗಿಸಿಕೊಳ್ಳಿ. ಬೆಂದ ಪದಾರ್ಥಗಳನ್ನು ಕರಗಿರುವ ಬೆಲ್ಲದ ಜೊತೆಗೆ ಸೇರಿಸಿ ಒಂದು ಕಪ್ ಹಾಲನ್ನು ಹಾಕಿ ಮಿಶ್ರಣ ಮಾಡಿ. ಬೆಲ್ಲದೊಂದಿಗೆ ಹೊಂದಿಕೊಂಡು ಗಟ್ಟಿಯಾಗುವರೆಗೂ ಬೇಯಿಸಿ ಗಟ್ಟಿಯಾಗುತ್ತಾ ಬಂದಾಗ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿ, ಲವಂಗವನ್ನು ಹುರಿದು ಹಾಕಿ. ಬಳಿಕ ಏಲಕ್ಕಿಪುಡಿ, ಒಣಕೊಬ್ಬರಿ ತುರಿ, ಪಚ್ಚಕರ್ಪೂರ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. -ವೇದಾವತಿ ಹೆಚ್. ಎಸ್.