ಹಲಸಿನ ತೊಳೆಯ ರುಚಿಕರ ಪಲ್ಯ
ಬರಹಗಾರರ ಬಳಗ
ಮಾರ್ಚ್ ೦೬, ೨೦೨೬
೭ ವೀಕ್ಷಣೆಗಳು
ಉಪ್ಪಿನಲ್ಲಿ ಹಾಕಿಟ್ಟ ತೊಳೆಯನ್ನು ಜಾಡಿಯಿಂದ ತೆಗೆದು ಒಂದು ದೊಡ್ಡ ಬೌಲಿಗೆ ಹಾಕಿ. ಇದಕ್ಕೆ ನೀರು ಹಾಕಿ ಅರ್ಧ ಗಂಟೆ ಹಾಗೇ ಇಡಿ. ಬಳಿಕ ನೀರಿನಿಂದ ಹಿಂಡಿ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಒಗ್ಗರಣೆ ಸಾಮಗ್ರಿ, ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಹೆಚ್ಚಿಟ್ಟುಕೊಂಡ ಹಲಸಿನ ತೊಳೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅರಿಶಿನ, ಬೆಲ್ಲದ ಪುಡಿ, ಸ್ವಲ್ಪ ನೀರು ಸೇರಿಸಿ ಮುಚ್ಚಳ ಮುಚ್ಚಿ ಬೇಯಿಸಿ. ಉಪ್ಪು ಬೇಕಿದ್ದರೆ ಮಾತ್ರ ಸೇರಿಸಿ. (ತೊಳೆಯಲ್ಲಿ ಉಪ್ಪು ಇರುತ್ತದೆ). ಚೆನ್ನಾಗಿ ಬೆಂದ ಮೇಲೆ ಕಾಯಿತುರಿ ಹಾಕಿ. ರುಚಿಕರ ಪಲ್ಯ ಊಟಕ್ಕೆ ರೆಡಿ.
-ಸುಮನಾ ಜಿ.ಪ್ರಸಾದ್
ಪ್ರಕಟಿಸಿದ: ಮಾರ್ಚ್ ೦೬, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬