ಖಾರ ಪೊಂಗಲ್
ಬರಹಗಾರರ ಬಳಗ
ಏಪ್ರಿಲ್ ೧೩, ೨೦೨೬
೮ ವೀಕ್ಷಣೆಗಳು
ಹೆಸರುಬೇಳೆಯನ್ನು ಪರಿಮಳ ಬರುವವರೆಗೆ ಹುರಿಯಿರಿ. ಬಳಿಕ ಹೆಸರುಬೇಳೆ ಮತ್ತು ಅಕ್ಕಿಯನ್ನು ಕುಕ್ಕರಿಗೆ ಹಾಕಿ. ನೀರು, ಒಂದು ಚಮಚ ತುಪ್ಪ, ಉಪ್ಪು ಹಾಕಿ ಮುಚ್ಚಳ ಮುಚ್ಚಿ ಮೂರು ವಿಷಲ್ ಬರುವವರೆಗೆ ಬೇಯಿಸಿ. ಬಳಿಕ ನಿಧಾನವಾಗಿ ಮಿಶ್ರಣ ಮಾಡಿ. ಬಾಣಲೆಗೆ ಆರು ಚಮಚ ತುಪ್ಪ ಹಾಕಿ ಬಿಸಿಯಾದ ಬಳಿಕ ಕಾಳುಮೆಣಸು, ಕಾಳುಮೆಣಸಿನ ಪುಡಿ, ಹಸಿಶುಂಠಿ, ಕರಿಬೇವು, ಇಂಗು, ಗೋಡಂಬಿಯನ್ನು ಹಾಕಿ ಕೆಂಬಣ್ಣ ಬರುವರೆಗೆ ಹುರಿಯಿರಿ. ಇದನ್ನು ತಯಾರಿಸಿದ ಪೊಂಗಲಿಗೆ ಸೇರಿಸಿ ಮಿಶ್ರಣ ಮಾಡಿ. ರುಚಿಕರವಾದ ಮತ್ತು ಆರೋಗ್ಯಕರವಾದ ಖಾರ ಪೊಂಗಲ್ ಸವಿಯಲು ಸಿದ್ಧ.
-ವೇದಾವತಿ ಹೆಚ್ ಎಸ್
ಪ್ರಕಟಿಸಿದ: ಏಪ್ರಿಲ್ ೧೩, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬