ಎಳೆಯ ಹಲಸಿನ ತೊಳೆ (ಬೇಳೆಚಕ್ಕೆ) ಹಲಸಿನ ಬೀಜ ಸೇರಿಸಿ ಸ್ವಚ್ಛಗೊಳಿಸಿಕೊಂಡು, ಕುಕ್ಕರಿನಲ್ಲಿ ಒಂದು ವಿಸಿಲ್ ಹಾಕಿಸಿ ಬೇಯಿಸಿಡಬೇಕು. ಬೇಯಿಸುವ ಮೊದಲೆ ಉಪ್ಪು, ಸ್ವಲ್ಪ ಅರಶಿನ ಹುಡಿ, ತೆಂಗಿನಣ್ಣೆ, ಕರಿಬೇವಿನ ಸೊಪ್ಪು ಸೇರಿಸಿ ಹೋಳುಗಳು ಬೇಯುವಷ್ಟು ನೀರು ಸೇರಿಸಬೇಕು. ಒಣಮೆಣಸು, ಜೀರಿಗೆ, ಮೆಂತೆ, ಉದ್ದಿನಬೇಳೆ, ನಾಲ್ಕು ಕಾಳು ಕೊತ್ತಂಬರಿ, ಅರಶಿನಹುಡಿ ಹುರಿದು, ಸ್ವಲ್ಪ ಹುಣಿಸೇಹುಳಿ, ತೆಂಗಿನಕಾಯಿ ಎಸಳು ಸೇರಿಸಿ ರುಬ್ಬಿ ಬೇಯಿಸಿಟ್ಟ ಹೋಳುಗಳಿಗೆ ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ, ಒಗ್ಗರಣೆ ಕೊಟ್ಟು ಕೆಳಗಿಳಿಸಿ ಮುಚ್ಚಿಡಬೇಕು. ರುಚಿಯಾದ ಖಾರಮಸಾಲೆ ಎಳೆಯ ಹಲಸಿನತೊಳೆಯ ಜೀರಿಗೆ ಬೆಂದಿ (ಕೂಟು) ದೋಸೆ, ಚಪಾತಿ, ಪೂರಿ ಜೊತೆ ತಿನ್ನಬಹುದು.(ಸಿಹಿ ಬೇಕಾದರೆ ಸ್ವಲ್ಪ ಬೆಲ್ಲ ಸೇರಿಸಬಹುದು) -ರತ್ನಾ ಭಟ್ ತಲಂಜೇರಿ