ಒಂದು ಸಣ್ಣ ಬೋಗುಣಿಯಲ್ಲಿ ಆಮ್ ಚೂರ್, ಕೆಂಪು ಮೆಣಸಿನ ಹುಡಿ, ಬ್ಲ್ಯಾಕ್ ಸಾಲ್ಟ್, ಜೀರಿಗೆ ಹುಡಿ, ಚಾಟ್ ಮಸಾಲಾವನ್ನು ಚೆನ್ನಾಗಿ ಬೆರೆಸಿ. ಬ್ರೆಡ್ ಹಾಳೆಗಳ ಬದಿಗಳನ್ನು ಕತ್ತರಿಸಿ ತೆಗೆಯಿರಿ. ಬಿಳಿ ಭಾಗದ ಒಂದು ಹಾಳೆಯನ್ನು ನಾಲ್ಕು ತುಂಡು ಮಾಡಿ. ಒಂದು ಪ್ಲೇಟಿನ ಮೇಲೆ ಬ್ರೆಡ್ಡಿನ ತುಂಡುಗಳನ್ನು ಬಿಡಿಸಿ ಇಡಿ. ಪ್ರತೀ ತುಂಡಿನ ಮೇಲೆ ಹುಣಸೇ ರಸವನ್ನು ಹಾಕಿ, ಬಳಿಕ ಕ್ರಮವಾಗಿ ಮಸಾಲಾ ಹುಡಿ, ಈರುಳ್ಳಿ ಬಿಲ್ಲೆ, ಲಿಂಬೇರಸ ಚಿಮುಕಿಸಿ. ಪುನಃ ಮೇಲಿನಿಂದ ಮಸಾಲಾ ಹುಡಿ ಚಿಮುಕಿಸಿ. ಬೇಯಿಸಿದ ಬಟಾಟೆ ಬಿಲ್ಲೆಗಳನ್ನು ಇರಿಸಿ. ಹುಣಸೇರಸ ಚಿಮುಕಿಸಿರಿ. ಮಸಾಲಾಹುಡಿಯನ್ನು ಚಿಮುಕಿಸಿರಿ. ಟೊಮೆಟೋ ಬಿಲ್ಲೆಗಳನ್ನು ಇಡಿ. ಮತ್ತೆ ಮಸಾಲಾಹುಡಿಯನ್ನು ಚಿಮುಕಿಸಿರಿ. ಬಳಿಕ ಬೇಯಿಸಿದ ಕಡ್ಲೆ, ಸೇವ್, ನೆಲಗಡಲೆ ಹಾಕಿ. ಉಳಿದ ಲಿಂಬೇರಸ ಹಾಗೂ ಮಸಾಲಾ ಹುಡಿ ಉದುರಿಸಿರಿ. ಮೇಲಿನಿಂದ ಓಂ ಕಾಳಿನ ಹುಡಿ, ಕಾಯಿ ತುರಿ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿರಿ. ಕೂಡಲೇ ಸವಿಯಿರಿ.