ಸಿಹಿಸಿಹಿ ಅವಲಕ್ಕಿ
ಬರಹಗಾರರ ಬಳಗ
ಡಿಸೆಂಬರ್ ೦೭, ೨೦೨೫
೧೭ ವೀಕ್ಷಣೆಗಳು
ಅವಲಕ್ಕಿಯನ್ನು ಹದವರಿತು ಹುರಿದುಕೊಂಡು ಪುಡಿ ಮಾಡಿಟ್ಟುಕೊಳ್ಳಬೇಕು, ದಪ್ಪ ತಳದ ಬಾಂಡ್ಲಿಗೆ ಬೆಲ್ಲ, ಒಣಕೊಬ್ಬರಿ ತುರಿ, ಏಲಕ್ಕಿ ಪುಡಿ, ತುಪ್ಪ ಹಾಕಿ ಒಟ್ಟಾಗಿ ಕೂಡಿಸಿಕೊಳ್ಳಿ ಆನಂತರ ಒಂದು ಬಾಯಿ ಅಗಲವಿರುವ ಉದ್ದಲೋಟ ತೆಗೆದುಕೊಂಡು ಒಳಭಾಗಕ್ಕೆ ಚೆನ್ನಾಗಿ ತುಪ್ಪ ಸವ ಲೋಟದ ಮಧ್ಯೆ ೧-೨ ಗೋಡಂಬಿ ಇಡಿ. ಲೋಟದ ¾ ಭಾಗ ಮಿಶ್ರಣವನ್ನು ತುಂಬಬೇಕು. ಈ ಲೋಟದ ಒಳಗೆ ಹೋಗಬಹುದಾದ ಇನ್ನೊಂದು ಲೋಟಕ್ಕೆ ತುಪ್ಪ ಸವರಿ ದೊಡ್ಡ ಲೋಟವನ್ನು ಮಗುಚಿ ಹಾಕಿ ತಟ್ಟಿ, ನಿಧಾನವಾಗಿ ಮೇಲಿನ ಲೋಟ ತೆಗೆದರೆ ಗೋಪುರ ಆಕಾರದಲ್ಲಿ ಈ ಸಿಹಿ ತಿಂಡಿ ನೋಡಲು ಸುಂದರವಷ್ಟೇ ಅಲ್ಲ ತಿನ್ನಲು ರುಚಿಕರ!
-ಎಸ್. ರೋಹಿಣಿ ಶರ್ಮ, ಸಾಗರ
ಪ್ರಕಟಿಸಿದ: ಡಿಸೆಂಬರ್ ೦೭, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬